ನೋಕಿಯಾ 3310 ಮಾಡೆಲ್ ಜಾಹೀರಾತು ನೋಡಿದ ಜ್ಞಾಪಕ ಇದೆಯೇ ? ಇಟ್ಟಿಗೆಯಷ್ಟೇ ಗಟ್ಟಿಯಾದ ಈ ಮೊಬೈಲ್ ಫೋನ್ 15 ವರ್ಷಗಳ ಮುನ್ನ ಎಲ್ಲರ ಮನಸ್ಸನ್ನು ಗೆದ್ದಿತ್ತು. ಎಷ್ಟೇ ಎತ್ತರಿಂದ ಎಸೆದರೂ ಕೂಡ ಕಿಂಚಿತ್ತೂ ಸೀಳಾಗದೆಯೇ, ಮುರಿಯದೆಯೇ ಚೆನ್ನಾಗಿ ಕಾರ್ಯನಿರ್ವಹಿಸಿದ ಕೀರ್ತಿ ಈ 3310 ಮಾಡೆಲ್‍ನದ್ದು.
ಒಂದು ಥರ ಈಗಿನ ಸ್ಮಾರ್ಟ್ ಫೋನ್‍ಗಳ ಪಿತಾಮಹ ಎಂದೇ ಕರೆಯಬಹುದು. ಆದರೆ, ವಿಚಾರ ಅದಲ್ಲ. ಇಂಥ ಗಟ್ಟಿಮುಟ್ಟಾದ ಮೊಬೈಲ್ ಅನ್ನು ಬಳಸುವುದು ಬಿಟ್ಟು, ಮಹಾಶಯನೊಬ್ಬ ನುಂಗಿಕೊಂಡು ಪರದಾಡಿದ್ದಾನೆ !
ಹೌದು, ಆಗ್ನೇಯ ಯುರೋಪಿನ ರಾಜ್ಯ ಕೊಸೊವೊದ ಪ್ರಿಸ್ಟಿನಾದ 33 ವರ್ಷದ ನಿವಾಸಿ 3310 ಮೊಬೈಲ್ ನುಂಗಿಕೊಂಡು, ಹೊಟ್ಟೆನೋವಿನಿಂದ ಕಿರುಚಾಡಿದ್ದಾನೆ. ಬಳಿಕ ಆತನ ಹೊಟ್ಟೆಯನ್ನು ಕೊಯ್ದು, ಮೊಬೈಲ್ ಹೊರತೆಗೆಯಲಾಗಿದೆ. ಡಾ. ಸ್ಕೆಂದೆರ್ ತೆಲಕು ಎನ್ನುವವರು ಎರಡು ಗಂಟೆಗಳ ಕಾಲ ಗಂಭೀರ ಸ್ವರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿಸಿದ್ದಾರೆ.
BIG NEWS: ಕಾಂಗ್ರೆಸ್ ಇದಕ್ಕಿಂತ ಮತ್ತಷ್ಟು ಹೀನಾಯ ಸೋಲು ಕಾಣಲಿದೆ; ಸಚಿವ ಆರ್.ಅಶೋಕ್ ವಾಗ್ದಾಳಿ
ಹೊಟ್ಟೆಯಿಂದ ಹೊರತೆಗೆದ ಮೊಬೈಲ್‍ನ ಫೋಟೊಗಳನ್ನು ಅವರು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬ್ಯಾಟರಿಯಲ್ಲಿನ ರಾಸಾಯನಿಕಗಳು ಹೊಟ್ಟೆಯಲ್ಲಿ ಮಿಶ್ರಿತವಾಗಿದ್ದರೆ ಮೊಬೈಲ್ ಸ್ಫೋಟಗೊಳ್ಳುವ ಅಪಾಯವಿತ್ತು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
2016ರಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ಮೊಬೈಲ್ ನುಂಗಿಕೊಂಡು ಹಲವಾರು ಬಾರಿ ವಾಂತಿ ಮಾಡಿದರೂ ಕೂಡ ಹೊರಕ್ಕೆ ಬಾರದೆಯೇ, ಕೊನೆಗೆ ಅಪಾಯಕಾರಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಬಚಾವಾದ ಘಟನೆ ದೊಡ್ಡ ಸುದ್ದಿಯಾಗಿತ್ತು.