ರಿಲೇಶನ್‌ಶಿಪ್‌ಗಳ ವೈಖರಿಯನ್ನೇ ಬದಲಿಸಿಬಿಟ್ಟಿರುವ ಡೇಟಿಂಗ್ ಅಪ್ಲಿಕೇಶನ್‌ಗಳು ತುರಂತವಾಗಿ ಸಂಗಾತಿಗಳನ್ನು ಹುಡುಕಲು ಜನರಿಗೆ ದಾರಿ ಮಾಡಿಕೊಟ್ಟಿವೆ.
ಆದರೂ ಸಹ ಕೆಲವೊಂದು ಮಂದಿ ಇನ್ನೂ ಹಳೆಯ ಮಾದರಿಯಲ್ಲೇ ತಮ್ಮ ಸಂಗಾತಿಗಳನ್ನು ಹುಡುಕಿಕೊಂಡು ಮೊದಲ ಡೇಟ್‌ಗೆ ಹೋಗಲು ಇಚ್ಛಿಸುತ್ತಾರೆ. ಇದರ ನಡುವೆಯೇ, ಡೇಟಿಂಗ್‌ನ ಶೈಲಿಯನ್ನು ದೊಡ್ಡ ಮಟ್ಟದಲ್ಲಿ ಒಂದೇ ಬಾರಿಗೆ ಬದಲಿಸಿಬಿಟ್ಟಿವೆ ಈ ಡೇಟಿಂಗ್ ಅಪ್ಲಿಕೇಶನ್‌ಗಳು.
ನಾಲ್ಕು ಅಕ್ಷರ ಬಳಸಿ 11 ಮಕ್ಕಳಿಗೆ ಹೆಸರಿಟ್ಟಿದ್ದಾರೆ ಈ ದಂಪತಿ….!
ಇತ್ತೀಚಿನ ದಿನಗಳಲ್ಲಿ ಹುಡುಗ ಹಾಗೂ ಹುಡುಗಿಯರು ಪರಸ್ಪರ ಸಂಪರ್ಕ ಸಾಧಿಸಲು ಕೆಲವೇ ಸೆಕೆಂಡ್‌ಗಳು ಸಾಕು. ಸ್ಮಾರ್ಟ್‌ಫೋನ್ ಮೇಲೆ ಒಂದೆರಡು ಬಾರಿ ಟ್ಯಾಪ್ ಮಾಡಿಬಿಟ್ಟರೆ ನಿಮ್ಮ ಡೇಟಿಂಗ್‌ಗೆ ವೇದಿಕೆ ಸಜ್ಜು!
ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್: 18 ಸಾವಿರ ರೇಷನ್ ಕಾರ್ಡ್ ರದ್ದು
ಆದರೆ ಕೆಲವೊಮ್ಮೆ ಇದೇ ಡೇಟಿಂಗ್ ಅಪ್ಲಿಕೇಶನ್‌ಗಳು ಎಡವಟ್ಟಾದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತವೆ. ಅವುಗಳಲ್ಲಿ ಒಂದು ಈ ಕಥೆ.
ಡೇಟಾಬೇಸ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರ ಹೆಸರುಗಳಿಲ್ಲ ಎಂದು ಆಪಾದಿಸಿದ ಡೆನ್ವರ್ ಮೂಲದ ಡೇಟಿಂಗ್ ತಾಣದ ಬಳಕೆದಾರನೊಬ್ಬ ಈ ಜಾಲತಾಣದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾನೆ.
29 ವರ್ಷದ ಇಯಾನ್ ಕ್ರಾಸ್ ಎಂಬ ಈತ, ಡೆನ್ವರ್ ಡೇಟಿಂಗ್ ಕೋ ಎಂಬ ಜಾಲತಾಣ ನಡೆಸುವ ಎಚ್‌ಎಂಜ಼ಡ್ ಸಮೂಹದ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಇಳಿದಿದ್ದಾರೆ.
ಬಾಲಕನಿಗೆ ಸಿಕ್ತು 100 ವರ್ಷಗಳ ಹಿಂದಿನ ಹಳೆ ಲವ್ ಲೆಟರ್…!
ತನ್ನ ಡೇಟಾಬೇಸ್‌ನಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರನ್ನು ಹೊಂದಿರುವ ಡೆನ್ವರ್ ಡೇಟಿಂಗ್‌ನಿಂದಾಗಿ ಆಗಿರುವ ಹಾನಿಯನ್ನು ಕಟ್ಟಿಕೊಡಲು ಕೋರಿ ಈತ ಕೋರ್ಟ್ ಮೆಟ್ಟಿಲೇರಿದ್ದಾನೆ.
ಎಕ್ಸಿಕ್ಯೂಟಿವ್ ಒಬ್ಬರು ’ಭಾರೀ ಸಂಖ್ಯೆಯಲ್ಲಿ 25-35ರ ವಯೋಮಾನದ ಮಹಿಳೆಯರ ದತ್ತಾಂಶವಿದೆ’ ಎಂದು ಹೇಳಿದ ಬಳಿಕ ಜಾಲತಾಣದ ಸದಸ್ಯತ್ವಕ್ಕೆಂದು $9,409 ತೆತ್ತ ಕ್ರಾಸ್, ವಾಸ್ತವದಲ್ಲಿ ಅಲ್ಲಿ 18-35 ವರ್ಷ ವಯೋಮಾನದ ನಡುವಿನ ಬರೀ ಐವರು ಮಹಿಳೆಯರು ಎಂದಿದ್ದಾನೆ.
ಆರು ಅಡಿಗಿಂತ ಕಡಿಮೆ ಎತ್ತರವಿದ್ದ ವ್ಯಕ್ತಿಯೊಂದಿಗೆ ತನ್ನನ್ನು ಮ್ಯಾಚ್ ಮಾಡಿದ ಡೇಟಿಂಗ್ ಅಪ್ಲಿಕೇಶನ್ ಒಂದರ ವಿರುದ್ಧ ಕಳೆದ ಆಗಸ್ಟ್‌ನಲ್ಲಿ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು.
ಐಲೀನ್ ಮೂರ್ ಹೆಸರಿನ ಈ ಮಹಿಳೆ, ತನಗಾದ ಈ ’ಅನ್ಯಾಯಕ್ಕೆ’ ಡೇಟಿಂಗ್ ಅಪ್ಲಿಕೇಶನ್ ಕಂಪನಿ ಎಲೈಟ್ ಇಂಟ್ರೊಡಕ್ಷನ್ಸ್ $4,995ಅನ್ನು ಮರುಪಾವತಿ ಮಾಡಬೇಕೆಂದು ಕೋರಿದ್ದಲ್ಲದೇ ಜೊತೆಗೆ ಕ್ಷಮಾಪಣಾ ಪತ್ರವನ್ನೂ ಬರೆದುಕೊಡಲು ಕೋರಿದ್ದಳು.