
ಬೆಂಗಳೂರು: ವಿಮಾನದಲ್ಲಿ ಶೌಚಾಲಯಕ್ಕೆ ಹೋಗಿದ್ದ ಪ್ರಯಾಣಿಕರೊಬ್ಬರು ಫ್ಲೈಟ್ ಟಾಯ್ಲೆಟ್ ಡೋರ್ ಸ್ಟ್ರಕ್ ಆಗಿ ತಮ್ಮ ಇಡೀ ಪ್ರಯಾಣವನ್ನು ಶೌಚಾಲಯದಲ್ಲಿಯೇ ಕಳೆದ ಘಟನೆ ಸ್ಪೈಸ್ ಜೆಟ್ ನಲ್ಲಿ ನಡೆದಿದೆ.
ಮುಂಬೈನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು, ಮುಂಬೈನಲ್ಲಿ ಫ್ಲೈಟ್ ಟೇಕ್ ಆಫ್ ಆಗುತ್ತಿದ್ದಂತೆ ಟಾಯ್ಲೆಟ್ ಗೆ ಹೋಗಿದ್ದಾರೆ. ಈ ವೇಳೆ ವಿಮಾನದ ಶೌಚಾಲಯದ ಬಾಗಿಲು ಒಳಗಿನಿಂದ ಟ್ರ್ಯಾಪ್ ಆಗಿದೆ. ಶೌಚಾಲಯದ ಒಳಗಡೆ ಸಿಲುಕಿದ ಪ್ರಯಾಣಿಕ ರಕ್ಷಣೆಗಾಗಿ ಸಿಬ್ಬಂದಿಗಳನ್ನು ಕೂಗಿಕೊಂಡಿದ್ದಾರೆ.
ಸ್ಪೈಸ್ ಜೆಟ್ SG-268 ವಿಮಾನ ಸೋಮವಾರ ರಾತ್ರಿ 10:20ಕ್ಕೆ ಮುಂಬೈನಿಂದ ಬೆಂಗಳೂರಿಗೆ ಹೊರಟಿತ್ತು. ಸೀಟ್ ನಂ.14Dಯಲ್ಲಿ ಕುಳಿತಿದ್ದ ಪ್ರಯಾಣಿಕ ಟಾಯ್ಲೆಟ್ ಗೆ ಹೋಗಿದ್ದಾರೆ. ಏಕಾಏಕಿ ವಿಮಾನದ ಟಾಯ್ಲೆಟ್ ಡೋರ್ ಟ್ರ್ಯಾಪ್ ಆಗಿ ಪ್ರಯಾಣಿಕ ಶೌಚಾಲಯದಲ್ಲಿಯೇ ಸಿಲುಕಿಕೊಂಡಿದ್ದಾರೆ. ವಿಮಾನದ ಸಿಬ್ಬಂದಿಗಳು ಟಾಯ್ಲೆಟ್ ಡೋರ್ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಗಗನಸಖಿಯೊಬ್ಬರು ತಾವು ಟಾಯ್ಲೆಟ್ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದೇವೆ ಆದರೆ ಸಾಧ್ಯವಾಗುತ್ತಿಲ್ಲ. ಹೆದರಬೇಡಿ ಎಂದು ಬ್ರೌನ್ ಪೇಪರ್ ನಲ್ಲಿ ಬರೆದು ಶೌಚಾಲಯದ ಒಳಗಿದ್ದ ಪ್ರಯಾಣಿಕನಿಗೆ ಧೈರ್ಯ ತುಂಬಿದ್ದಾರೆ.
ವಿಮಾನ ಮಂಗಳವಾರ ತಡ ರಾತ್ರಿ 3:42ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ತಕ್ಷಣ ವಿಮಾನದ ಇಂಜಿನಿಯರ್ ಗಳು ಧಾವಿಸಿ ಬಂದು ವಿಮಾನದ ಟಾಯ್ಲೆಟ್ ಡೋರ್ ಒಡೆದು ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಅಲ್ಲದೇ ಪ್ರಯಣಿಕರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಪ್ರಯಾಣಿಕ ಸುರಕ್ಷಿತರಾಗಿದ್ದಾರೆ. ಒಟ್ಟಾರೆ ಪ್ರಯಾಣಿಕ ಮುಂಬೈನಿಂದ ಬೆಂಗಳೂರಿನವರೆಗೆ ತನ್ನ ಇಡೀ ಪ್ರಯಾಣವನ್ನು ವಿಮಾನದ ಶೌಚಾಲಯದಲ್ಲಿಯೇ ಕಳೆದಿದ್ದಾರೆ.