ಮಿನಿ ಗಾಲ್ಫ್ ಕೋರ್ಸ್ನಲ್ಲಿದ್ದ ಮೊಸಳೆಯೊಂದನ್ನ ಕದ್ದ ವ್ಯಕ್ತಿಯೊಬ್ಬ ಅದನ್ನು ಕಟ್ಟಡವೊಂದರ ಮೇಲ್ಛಾವಣಿಗೆ ಎಸೆಯಲು ಯತ್ನಿಸಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ವಿಚಿತ್ರ ಅಂದರೆ ಈ ವ್ಯಕ್ತಿಯು ಮೊಸಳೆಯನ್ನಎಸೆಯುವ ಮೂಲಕ ಅದಕ್ಕೆ ಪಾಠ ಕಲಿಸಬೇಕು ಎಂದು ಪ್ಲಾನ್ ಮಾಡಿದ್ದನಂತೆ.
32 ವರ್ಷದ ವಿಲಿಯಮ್ ರನ್ನ ಡೆಯ್ಟೋನಾ ಬೀಚ್ ಶೋರ್ಸ್ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೊಸಳೆಯನ್ನ ಬಾಲವನ್ನ ಹಿಡಿದು ಅದನ್ನು ಎಸೆಯಲು ವಿಲಿಯಮ್ ಪ್ರಯತ್ನಿಸಿದ್ದನಂತೆ.
ವರದಿಗಳ ಪ್ರಕಾರ ವಿಲಿಯಮ್ ಈ ಮೊಸಳೆಯನ್ನ ಎಸೆಯೋದಕ್ಕೂ ಮುನ್ನ ಎರಡು ಬಾರಿ ನೆಲಕ್ಕೆ ಬಡಿದಿದ್ದನಂತೆ. ಪೊಲೀಸರ ಬಳಿ ಈತ ತಾನು ಅದಕ್ಕೆ ಪಾಠ ಕಲಿಸಬೇಕು ಎಂಬುದರ ಸಲುವಾಗಿ ಈ ರೀತಿ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ವಿಲಿಯಮ್ ಬಂಧನದ ಬಳಿಕ ಮೊಸಳೆಯನ್ನು ಕಾಂಗೋ ನದಿ ಗಾಲ್ಪ್ಗೆ ಹಿಂದಿರುಗಿಸಲಾಗಿದೆ ಎಂದು ಡೆಟೋನಾ ಬೀಚ್ ಶೋರ್ಸ್ ಸಾರ್ವಜನಿಕ ಸುರಕ್ಷತಾ ಇಲಾಖೆ ಮಾಹಿತಿ ನೀಡಿದೆ. ಮೊಸಳೆಗೆ ಕೆಲ ಗಾಯಗಳಾಗಿದ್ದು ಬದುಕುಳಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.