ಇಂಡೋನೇಷಿಯನ್ ಅರಣ್ಯದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಪ್ರಪಂಚದ ಅತಿದೊಡ್ಡ ಹೂವು ರಾಫ್ಲೆಸಿಯಾವನ್ನು ಕಂಡುಕೊಂಡಿದ್ದು, ಅದನ್ನು ವಿಡಿಯೋ ಮಾಡಿ ಜಗತ್ತಿಗೆ ಪರಿಚಯಿಸಿದ್ದಾರೆ.
ಇದು ಇಂಡೋನೇಷ್ಯಾದ ಮಳೆಕಾಡುಗಳಲ್ಲಿ ಕಂಡುಬರುವ ಹೂವು. ಈ ಹೂವಿನ ವಾಸನೆಯ ಕಾರಣಕ್ಕೆ ಶವದ ಹೂವು ಎಂದೂ ಕರೆಯಲಾಗುತ್ತದೆ. ಈಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊವು ಪೂರ್ಣವಾಗಿ ಅರಳುತ್ತಿರುವ ರಾಫ್ಲೆಸಿಯಾವನ್ನು ತೋರಿಸುತ್ತದೆ.
ಕೆಂಪು ಹೂವು ಪೂರ್ಣವಾಗಿ ಅರಳುತ್ತದೆ, ಐದು ದಳಗಳನ್ನು ಹೊಂದಿದ್ದು, ಹೂವಿನ ಮಧ್ಯಭಾಗವನ್ನು ಹತ್ತಿರದಿಂದ ನೋಡಲು ಕ್ಯಾಮರಾ ಜೂಮ್ ಮಾಡಲಾಗುತ್ತದೆ.
ರಾಫ್ಲೆಸಿಯಾ 3 ಅಡಿಗಳವರೆಗೆ ಬೆಳೆಯಬಹುದು ಮತ್ತು 15 ಪೌಂಡ್‌ಗಳವರೆಗೆ ತೂಗುತ್ತದೆ. ಇದು ಪರಾವಲಂಬಿ ಸಸ್ಯವಾಗಿದ್ದು, ಯಾವುದೇ ಎಲೆಗಳು, ಬೇರು ಅಥವಾ ಕಾಂಡಗಳಿಲ್ಲ. ಈ ಹೂವು ತನ್ನದೇ ಆದ ಆಹಾರ ತಯಾರಿಸಲು ಸೂರ್ಯನಿಂದ ಶಕ್ತಿಯನ್ನು ಸಹ ಬಳಸುವುದಿಲ್ಲ.