ಜಗತ್ತಿನ ಯಾವುದೇ ದೊಡ್ಡ ವಿದ್ಯಮಾನಗಳು ಘಟಿಸಿದಾಗಲೂ ಅವುಗಳ ದಿನಾಂಕಗಳನ್ನು ಕೂಡಿ-ಕಳೆದು-ಗುಣಿಸಿ-ಭಾಗಿಸಿ, ಏನಾದರೊಂದು ಕಾಕತಾಳಿಯ ಸೃಷ್ಟಿಸುವ ಅಭ್ಯಾಸ ಅನೇಕ ಮಂದಿಗೆ ಇದೆ.
ಮೊದಲ ವಿಶ್ವ ಮಹಾಯುದ್ಧ ಹಾಗೂ ದ್ವಿತೀಯ ವಿಶ್ವ ಮಹಾಯುದ್ಧಗಳ ದಿನಾಂಕ ಹಾಗೂ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ದಿನಾಂಕಗಳ ನಡುವೆ ಏನೋ ಸಾಮ್ಯತೆ ಇದೆ ಎನ್ನುತ್ತಾರೆ ಟ್ವಿಟರ್ ಬಳಕೆದಾರ ಪ್ಯಾಟ್ರಿಕ್ ಬೆಟ್-ಡೇವಿಡ್.
ಹೈದರಾಬಾದ್ ಮನೆಗೆ ನುಗ್ಗಿದ ಕಳ್ಳನ ಸುಳಿವನ್ನು ಅಮೆರಿಕದಿಂದಲೇ ಪೊಲೀಸರಿಗೆ ಮುಟ್ಟಿಸಿದ ಮಾಲೀಕ…!
ಆಸ್ಟ್ರಿಯಾ-ಹಂಗೇರಿಗಳು ಸರ್ಬಿಯಾ ಮೇಲೆ ಯುದ್ಧ ಸಾರಿದ ದಿನಾಂಕವಾದ 28 ಜುಲೈ 1914ರಲ್ಲಿರುವ ಅಂಕಿಗಳನ್ನು ತೆಗೆದುಕೊಂಡು ತಮಗೆ ಬೇಕಾದಂತೆ ಕೂಡಿ; 7, 28, 19, 14 ಸೇರಿದಾಗ 68 ಆಗುತ್ತದೆ ಎನ್ನುವ ಈತ, ದ್ವಿತೀಯ ಮಹಾಯುದ್ಧ ಆರಂಭಗೊಂಡ ದಿನಾಂಕವಾದ ಸೆಪ್ಟೆಂಬರ್ 1, 1939ರ ಅಂಕಿಗಳೂ ಸಹ ಕೂಡಿದಾಗ 68 ಆಗುತ್ತವೆ ಎಂದಿದ್ದಾರೆ.
ಮುಖ್ಯಮಂತ್ರಿಗೆ ಸೋಲಿನ ರುಚಿ ತೋರಿಸಿದ್ದು ಮೊಬೈಲ್ ರಿಪೇರಿ ಅಂಗಡಿ ಮಾಲೀಕ…! ಇಲ್ಲಿದೆ ಆಪ್ ಅಭ್ಯರ್ಥಿ ಕುರಿತ ಇಂಟ್ರಸ್ಟಿಂಗ್ ಮಾಹಿತಿ
ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದ ದಿನಾಂಕವಾದ ಫೆಬ್ರವರಿ 24, 2022ರ ದಿನಾಂಕದಲ್ಲಿರುವ ಅಂಕಿ ಸಂಖ್ಯೆಗಳನ್ನೂ ಸಹ ಹೀಗೆ ಕೂಡಿ; 24+2+20+22 = 68ರ ಲೆಕ್ಕ ತೋರುವ ಈತ, “ನನಗೆ ಎಲ್ಲವೂ ಗಣಿತದ ಸೂತ್ರ. ಇದು ಬಹಳ ವಿಚಿತ್ರವಾಗಿದೆ” ಎನ್ನುತ್ತಾರೆ.