ಜೀವನದಲ್ಲಿ ಸಾಧಿಸುವ ಗುರಿಯಿದ್ದರೆ ಏನು ಬೇಕಾದರೂ ಮಾಡಬಹುದು. ಅಂಥದ್ದೇ ಒಂದು ವಿಡಿಯೋವನ್ನು ಹಿಮಾಂಶು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಮೋಟಾರು ಚಾಲಿತ ಗಾಲಿ ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬ ಜೊಮ್ಯಾಟೊ ಡೆಲಿವರಿ ಬಾಯ್ ಆಗಿರುವುದನ್ನುಇದು ತೋರಿಸುತ್ತದೆ.
ಜೊಮ್ಯಾಟೊ ಟೀ ಶರ್ಟ್ ಧರಿಸಿ, ಡೆಲಿವರಿ ಏಜೆಂಟ್ ಆಗುತ್ತಿದ್ದೇನೆ ಎಂದು ಈ ಯುವಕನಿಗೆ ತಿಳಿದಾಗ ಆತನ ಮೊಗದಲ್ಲಿ ಪ್ರಕಾಶಮಾನವಾದ ನಗುವನ್ನು ಮಿನುಗುವುದನ್ನು ನೋಡಬಹುದು.
ಈ ವಿಡಿಯೋದಲ್ಲಿ ದೀಪಗಳು ಹಸಿರು ಬಣ್ಣಕ್ಕೆ ತಿರುಗಿದ ನಂತರ ಮತ್ತು ಟ್ರಾಫಿಕ್ ಚಲಿಸಲು ಪ್ರಾರಂಭಿಸಿದ ನಂತರ ಡೆಲಿವರಿ ಏಜೆಂಟ್ನನ್ನು ಜೂಮ್ ಮಾಡಿ ತೋರಿಸಲಾಗಿದೆ. ಆಗ ಆತ ಗಾಲಿಕುರ್ಚಿಯ ಮೇಲೆ ಕುಳಿತಿರುವುದನ್ನು ನೋಡಬಹುದು.
ಅನೇಕ ಮಂದಿ ಈತ ಎಲ್ಲರಿಗೂ ಸ್ಫೂರ್ತಿ ಎಂದು ಬರೆದಿದ್ದಾರೆ. ಗಾಲಿಕುರ್ಚಿಯ ಬೆಲೆಯನ್ನು ಕಡಿತಗೊಳಿಸುವುದರಿಂದ ಕಂಪನಿಯನ್ನು ಹಲವರು ಶ್ಲಾಘಿಸಿದ್ದಾರೆ.