alex Certify ಮಧ್ಯರಾತ್ರಿಯಲ್ಲೂ ಮಗನ ವಿಡಿಯೋ ಗೇಮ್‌ ಆಟ; ಅಪ್ಪ ಕೊಟ್ಟ ಶಿಕ್ಷೆಯೇನು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯರಾತ್ರಿಯಲ್ಲೂ ಮಗನ ವಿಡಿಯೋ ಗೇಮ್‌ ಆಟ; ಅಪ್ಪ ಕೊಟ್ಟ ಶಿಕ್ಷೆಯೇನು ಗೊತ್ತಾ ?

ಆನ್ಲೈನ್‌ ಗೇಮ್‌ಗಳ ಚಟ ಇಂದಿನ ದಿನಮಾನದಲ್ಲಿ ಮಕ್ಕಳನ್ನು ಸಾಕಿ ಸಲಹುವ ವಿಚಾರದಲ್ಲಿ ಪೋಷಕರ ಎದುರಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಸ್ಕ್ರೀನ್ ಮುಂದೆ ಕಳೆಯುವ ಸಮಯಕ್ಕೆ ಕಟ್ಟುನಿಟ್ಟಾದ ಮಿತಿ ನಿಗದಿಪಡಿಸುವುದು ಈಗಿನ ಪೋಷಕರಿಗೆ ಭಾರೀ ಸವಾಲಿನ ಕೆಲಸವಾಗಿದೆ.

ಮಲಗುವ ಸಮಯ ಮೀರಿದಾಗಲೂ ವಿಡಿಯೋ ಗೇಮ್ ಆಡುವುದು ಸರಿಯಲ್ಲ ಎಂದು ತನ್ನ ಮಗನಿಗೆ ಪಾಠ ಕಲಿಸಲೆಂದು ಇಲ್ಲೊಬ್ಬ ತಂದೆ ವಿಪರೀತ ಕ್ರಮವೊಂದಕ್ಕೆ ಮುಂದಾಗಿದ್ದಾನೆ. ಅರ್ಧರಾತ್ರಿ 1:30 ಗಂಟೆಯ ವೇಳೆ ವಿಡಿಯೋ ಗೇಮ್ ಆಡುತ್ತಿದ್ದ ತನ್ನ ಮಗನಿಗೆ ಸತತ 17 ಗಂಟೆಗಳ ಕಾಲ ವಿಡಿಯೋ ಗೇಮ್ ಆಡುವಂತೆ ಮಾಡುವ ಮೂಲಕ ಆತನಿಗೆ ನಿದ್ರೆ ಹಾಗೂ ಊಟಗಳಿಲ್ಲದಂತೆ ಮಾಡಿದ್ದಾನೆ ಈ ತಂದೆ.

ತನ್ನ ತಂದೆಯ ಈ ವಿಪರೀತ ವರ್ತನೆಯಿಂದ ಬೆಚ್ಚಿ ಬಿದ್ದ 11 ವರ್ಷದ ಮಗ ಕಣ್ಣೀರಿಟ್ಟು ತನ್ನನ್ನು ಬಿಟ್ಟುಬಿಡುವಂತೆ ಗೋಗರೆದಿದ್ದಾನೆ. ಚೀನಾದ ಶೆಂಜ಼ೆನ್ ನಗರದಲ್ಲಿ ಈ ಘಟನೆ ಜರುಗಿದೆ. ತಡರಾತ್ರಿ ವೇಳೆ ಹೀಗೆ ಸಿಕ್ಕಿಬಿದ್ದ ತನ್ನ ಮಗನಿಗೆ ಆತನಿಗೆ ಇಷ್ಟವಾಗುವ ಎಲ್ಲ ಆಟಗಳನ್ನೂ ಊಟ, ನಿದ್ರೆಗಳನ್ನು ಬಿಟ್ಟು ಆಡುವಂತೆ ಮಾಡುವ ಮೂಲಕ ಆತನಿಗೆ ಹೀಗೊಂದು ಕಠಿಣ ಪಾಠ ಕಲಿಸಿದ್ದಾನೆ ಈತ.

ಮೊದಲ ಆರು ಗಂಟೆಗಳ ಕಾಲ ಭಾರೀ ಖುಷಿಯಲ್ಲೇ ಆಟವಾಡಿದ ಪುತ್ರ, ಬೆಳಿಗ್ಗೆ 6:30ರ ವೇಳೆಗೆ ತನ್ನಿಚ್ಛೆಯ ಆಟದಲ್ಲೇ ಮುಳುಗಿದ್ದ. ಅಲ್ಲಿಂದ ಇನ್ನೂ ಆರು ಗಂಟೆಗಳ ಬಳಿಕ, ಮದ್ಯಾಹ್ನ 1:30ರ ವೇಳೆಗೆ ಆಯಾಸವಾಗಿ ನಿದ್ರೆ ಮೈಗತ್ತಲು ಆರಂಭಿಸಿದೆ. ಆದರೂ ಸಹ ತನ್ನ ಈ ಕಠಿಣ ಶಿಕ್ಷೆ ಮುಂದುವರೆಸಿದ ಹುವಾಂಗ್, ತನ್ನ ಮಗನನ್ನು ಎಬ್ಬಿಸಿ ಇನ್ನಷ್ಟು ಹೊತ್ತು ಆಟ ಮುಂದುವರೆಸುವಂತೆ ಮಾಡಿದ್ದಾನೆ. ಕೊನೆಗೆ ಸತತ 17 ಗಂಟೆಗಳ ಆಡಿದ ಮಗನಿಗೆ ಇನ್ನು ಮುಂದುವರೆಯುವುದು ಅಸಾಧ್ಯ ಎಂಬಂತಾಗಿ ತನ್ನ ತಂದೆಯತ್ತ ಕ್ಷಮೆಯಾಚಿಸಿ ಮಲಗಲು ಬಿಡುವಂತೆ ಕೇಳಿಕೊಂಡಿದ್ದಾನೆ.

“ಇನ್ನು ಮುಂದೆ 11 ಗಂಟೆಗೂ ಮುಂಚೆ ನಿದ್ರೆಗೆ ಹೋಗುತ್ತೇನೆ. ಮಲಗುವ ಮುನ್ನ ಫೋನ್‌ನಲ್ಲಿ ಅಥವಾ ಇತರೆ ಆಟಿಕೆಗಳನ್ನು ಬಳಸಿ ಆಟವಾಡುವುದಿಲ್ಲ ಎಂದು ಮಾತು ಕೊಡುತ್ತೇನೆ,” ಎಂದು ತನ್ನ ತಂದೆಗೆ ಪತ್ರದಲ್ಲಿ ಬರೆದುಕೊಟ್ಟಿದ್ದಾನೆ ಪುತ್ರ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...