
ಚಿಕನ್ ಪಾಯಿಂಟ್ ಹೆಸರಿನ ಉತ್ತರ ಪ್ರದೇಶದ ಗಾಜಿಯಾಬಾದ್ನ ಡಾಬಾದಲ್ಲಿ ಕೆಲಸ ಮಾಡುವ ವೃದ್ಧರೊಬ್ಬರು ರೋಟಿಗೆ ಉಗುಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ರಾಹಕರು ಇದನ್ನು ಚಿತ್ರೀಕರಿಸಿದ್ದಾರೆ.
ಊಟ ಮಾಡಲು ಹೋಟೆಲ್ ಗೆ ಹೋದ ಗ್ರಾಹಕರು, ತಂದೂರಿ ರೋಟಿ ಮಾಡುತ್ತಿರುವ ವೃದ್ಧನನ್ನು ಗಮನಿಸಿದ್ದಾರೆ. ಆತ ಬಿಸಿ ತಂದೂರಿನ ಒಳಗೆ ಹಾಕುವ ಮೊದಲು ರೊಟ್ಟಿಗಳ ಮೇಲೆ ಉಗುಳುತ್ತಿರುವುದು ಕಂಡುಬಂದಿದೆ. ಈ ವ್ಯಕ್ತಿಯನ್ನು ಬಿಹಾರದ ಕಿಶನ್ ಗಂಜ್ ಜಿಲ್ಲೆಯ ತಮೀಜುದ್ದೀನ್ ಎಂದು ಗುರುತಿಸಲಾಗಿದೆ.
ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಭಾರಿ ವೈರಲ್ ಆಗಿದೆ. ಸಾವಿರಾರು ಜನರು ಇದನ್ನು ವೀಕ್ಷಿಸಿದ್ದು, ಅಡುಗೆಯವರ ಕೃತ್ಯದಿಂದ ಅಸಹ್ಯಗೊಂಡಿದ್ದಾರೆ. ಅಲ್ಲದೆ ಆತನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವರದಿಗಳ ಪ್ರಕಾರ, ಅಪರಾಧಿ ತಮೀಜುದ್ದೀನ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ ಎನ್ನಲಾಗಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ.