ಆತ ಮಾನಸಿಕ ಅಸ್ವಸ್ಥ, ಆತನಿಗೆ ತಾಯಿಯೇ ಸರ್ವಸ್ವ. ಆಕೆ ಇಲ್ಲದ ಪ್ರಪಂಚ ಆತ ಎಂದೂ ಊಹೆ ಮಾಡಿಕೊಂಡಿಲಿಲ್ಲ. ಆದರೆ ಅದೊಂದು ದಿನ ಆತನ ಅಮ್ಮ ಮಲಗಿ ನಿದ್ದೆ ಮಾಡುತ್ತಿರುವಾಗಲೇ ಇಹಲೋಕ ತಜ್ಯಿಸಿ ಬಿಟ್ಟಿದ್ದಳು. ಮೂರು ದಿನಗಳ ನಂತರ ಆ ಮನೆಯಿಂದ ಶವದ ದುರ್ನಾತ ಬರ್ತಿದ್ದ ಹಾಗೆಯೇ, ಅಕ್ಕಪಕ್ಕದವರು ಬಂದು ನೋಡಿದಾಗಲೇ ಗೊತ್ತಾಗಿದ್ದು, ಆಕೆ ಸತ್ತು ಆಗಲೇ ಮೂರು ದಿನಗಳು ಕಳೆದಿದೆ ಅಂತ.
ಈ ಘಟನೆ ನಡೆದಿದ್ದು ಹೈದರಾಬಾದ್‌ನ ಮಲ್ಕಾಜ್‌ಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಷ್ಣುಪುರಿ ಕಾಲೋನಿಯಲ್ಲಿ. ಇಲ್ಲಿನ ಮೈತ್ರಿ ನಿವಾಸ್ ಅಪಾರ್ಟಮೆಂಟ್, ಫ್ಲಾಟ್ ನಂಬರ್ 202ನಲ್ಲಿ ವಿಜಯಾ ಮತ್ತು ಆಕೆಯ ಮಗ ಸಾಯಿಕೃಷ್ಣ ವಾಸಿಸುತ್ತಿದ್ದರು. ತಾಯಿ ಸತ್ತು ಮೂರು ದಿನವಾದರೂ ಮಗನಿಗೆ ಗೊತ್ತೇ ಆಗಿರಲಿಲ್ಲ. ಆತ ತಾಯಿ ಇನ್ನೂ ಮಲಗೇ ಇದ್ದಾಳೆಂದು, ಅದೇ ಶವದ ಜೊತೆ ಮೂರು ದಿನ ಕಳೆದಿದ್ದಾನೆ.
Big News: ವೋಟರ್ ಐಡಿ ಗೆ ‘ಆಧಾರ್’ ಜೋಡಣೆ ಶೀಘ್ರ
ಆದರೆ ಯಾವಾಗ ಶವದ ದುರ್ನಾತ ಅಕ್ಕಪಕ್ಕದ ಮನೆಯವರಿಗೆ ಬಂತೋ ಅವರಿಗೆ ಅನುಮಾನ ಬಂದಿದೆ. ತಕ್ಷಣವೇ ಮಲ್ಕಾಜ್‌ಗಿರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಮಾನಸಿಕ ಅಸ್ವಸ್ಥ ಸಾಯಿಕೃಷ್ಣನೇ ತನ್ನ ಅಮ್ಮನನ್ನ ಕೊಂದಿರಬಹುದು ಅನ್ನೊ ಅನುಮಾನವೂ ಇದೆ. ಸದ್ಯಕ್ಕೆ ಪೊಲೀಸರು ಈ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.