ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವಾಗ ಸ್ನಾಕ್ಸ್ ಜೊತೆಯಿದ್ದರೆ ತುಂಬಾನೇ ಖುಷಿ. ಇಲ್ಲವಾದರೆ ಸಿನಿಮಾ ನೋಡಿದಂಗೆ ಎನಿಸೋದಿಲ್ಲ. ಆದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ಗಿಂತ ಅಲ್ಲಿ ಸಿಗುವ ಸ್ನಾಕ್ಸ್ ಬೆಲೆಯೇ ದುಪ್ಪಟ್ಟಿರುತ್ತದೆ.
ಮೇಲಾಗಿ ಅಲ್ಲಿ ಹೊರಗಡೆಯಿಂದ ತಿಂಡಿ ತೆಗೆದುಕೊಂಡು ಹೋಗೋಕೂ ಅವಕಾಶ ಇರೋದಿಲ್ಲ. ಆದರೆ ಇಲ್ಲೊಬ್ಬ ಯುವಕ ಅತ್ಯಂತ ವಿಭಿನ್ನ ರೀತಿಯಲ್ಲಿ ಹೊರಗಿನ ತಿಂಡಿಗಳನ್ನು ಮಲ್ಟಿಪ್ಲೆಕ್ಸ್ನ ಒಳಗೆ ಕೊಂಡೊಯ್ದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮಾಲ್ನ ಫುಡ್ಕೋರ್ಟ್ನಲ್ಲಿ ತಿಂಡಿಗಳನ್ನು ಆರ್ಡರ್ ಮಾಡಿದ ಯುವಕ ಅದನ್ನು ಬಾಕ್ಸ್ ಒಂದರಲ್ಲಿ ತುಂಬಿದ್ದಾನೆ. ಆ ಬಾಕ್ಸ್ನ್ನು ಬ್ಯಾಗಿನೊಳಗೆ ಹಾಕಿಕೊಂಡು ಸೀದಾ ಥಿಯೇಟರ್ನ ಕಡೆಗೆ ತೆರಳಿದ್ದಾನೆ. ಇದಾದ ಬಳಿಕ ಚೆಕ್ಕಿಂಗ್ ಸಿಬ್ಬಂದಿ ಕೇವಲ ಬ್ಯಾಗ್ ಪರಿಶೀಲನೆ ಮಾಡಿದರೇ ಹೊರತು ಬಾಕ್ಸ್ನ ಒಳಗೆ ಏನಿತ್ತು ಅನ್ನೋದನ್ನ ನೋಡಿಲ್ಲ.
ಸೀದಾ ಆ ಯುವಕ ಮಲ್ಟಿಪ್ಲೆಕ್ಸ್ನ ಒಳಗೆ ಹೋಗಿ ಆ ಸ್ನಾಕ್ಸ್ ಎಂಜಾಯ್ ಮಾಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು , ಅನೇಕರು ನಾವು ಈ ಐಡಿಯಾ ಯೂಸ್ ಮಾಡುತ್ತೇವೆ ಎಂದು ಹೇಳಿದರೆ ಇನ್ನೂ ಕೆಲವರು ಈ ರೀತಿಯ ವಿಡಿಯೋಗಳನ್ನು ಮಾಡಿ ಹಾಕೋದ್ರಿಂದ ಮುಂದಿನ ಬಾರಿ ಸೆಕ್ಯೂರಿಟಿ ಸಿಬ್ಬಂದಿ ಇನ್ನಷ್ಟು ಅಲರ್ಟ್ ಆಗಿರ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.