ವಾಹನದ ದಾಖಲೆ ತೋರಿಸು ಎಂದು ಕೇಳಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಘಟನೆಯು ರೋಹಿಣಿ ಎಂಬಲ್ಲಿ ನಡೆದಿದೆ. 30 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪಿಯೂಷ್ ಬನ್ಸಾಲ್ ಎಂದು ಗುರುತಿಸಲಾಗಿದೆ. ಈತ ದೆಹಲಿಯ ಪೀತಾಂಪುರ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಿಯೂಷ್ ವಾಹನವನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ವಾಹನದ ದಾಖಲೆ ತೋರಿಸುವಂತೆ ಕೇಳಿದ್ದಾರೆ. ಆದರೆ ಈತ ಪೊಲೀಸರಿಗೆ ವಾಹನದ ದಾಖಲೆ ಪತ್ರಗಳನ್ನು ತೋರಿಸೋದನ್ನು ಬಿಟ್ಟು ವಾದಕ್ಕೆ ಇಳಿದಿದ್ದಾನೆ. ವಾದ ತಾರಕಕ್ಕೆ ಏರುತ್ತಿದ್ದಂತೆಯೇ ಆರೋಪಿ ಪಿಯೂಷ್ ಎಎಸ್ಐ ಕೆನ್ನೆಗೆ ಬಾರಿಸಿದ್ದು ಮಾತ್ರವಲ್ಲದೇ ಅವರ ಬೆರಳನ್ನು ಕಚ್ಚಿದ್ದಾನೆ ಎಂದು ತಿಳಿದು ಬಂದಿದೆ. ಬುಧವಾರ ಈ ಘಟನೆ ಸಂಭವಿಸಿದ್ದು ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.