
ಕತ್ತೆ ಒದೆಯುವುದಕ್ಕೆ ಫೇಮಸ್. ಆದರೆ ಇಲ್ಲೊಬ್ಬ ಮಹಾಶಯ ಕತ್ತೆಗೆ ಕಪಾಳ ಮೋಕ್ಷ ಮಾಡುವ, ಕಾಲಿನಲ್ಲೂ ಮುಖಕ್ಕೆ ಒದ್ದಿದ್ದು, ಇದರಿಂದ ರೋಸಿಹೋದ ಕತ್ತೆ ಆ ಕ್ಷಣವೇ ತನ್ನ ಸೇಡು ತೀರಿಸಿಕೊಂಡಿದೆ.
ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕತ್ತೆ ಪರವಾಗಿ ನಿಂತಿದ್ದಾರೆ.
ವ್ಯಕ್ತಿಯೊಬ್ಬ ಕತ್ತೆಯನ್ನು ನಿರ್ದಯವಾಗಿ ಹೊಡೆಯುತ್ತಿರುವ ಕ್ಲಿಪ್ ಅನ್ನು ಶಕ್ತಿ ಕಪೂರ್ ಎಂಬುವರು ಹಂಚಿಕೊಂಡಿದ್ದಾರೆ. ಮನುಷ್ಯನೊಬ್ಬ ಕತ್ತೆಗೆ ಒದ್ದರೆ ಅದೇನು ಮಹಾನ್ ಸುದ್ದಿಯಾಗುತ್ತಿರಲ್ಲ. ಆದರೆ, ಆ ಕತ್ತೆ ತಿರುಗೇಟು ಯಾವ ರೂಪದಲ್ಲಿ ಕೊಟ್ಟಿತೆಂಬುದು ಮಹತ್ವದ ಸಂಗತಿ.
ಆ ವ್ಯಕ್ತಿ ಕತ್ತೆಗೆ ಹಲವಾರು ಬಾರಿ ಕಪಾಳಮೋಕ್ಷ ಮಾಡಿ ಮತ್ತು ಅದರ ಮುಖಕ್ಕೆ ಒದೆಯುತ್ತಾನೆ. ತ್ವರಿತ ಕರ್ಮ ಸಂಭವಿಸಿದಂತೆ ಆತ ಕತ್ತೆ ಮೇಲೆ ಹತ್ತಿ ಕೂರುತ್ತಿದ್ದಂತೆ ಕತ್ತೆಯು ಸೇಡು ತೀರಿಸಿಕೊಳ್ಳಲು ಆರಂಭಿಸಿತು. ಕತ್ತೆಯು ಅವನ ಕಾಲನ್ನು ಕಚ್ಚಿ ಹಿಡಿದಿದ್ದು ಬಿಡಲಿಲ್ಲ. ಜೊತೆಗೆ ದರ ದರನೆ ಎಳೆದು ಗೋಳಾಡಿಸಿತು.
ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ನಂತರ ವಿಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಯಿತು. “ವಿಡಿಯೊದ ದ್ವಿತೀಯಾರ್ಧವು ಅತ್ಯುತ್ತಮವಾಗಿದೆ, ತೃಪ್ತಿಕರವಾಗಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಒಳ್ಳೆಯದು, ಕತ್ತೆಯಿಂದ ಒದೆ ತಿನ್ನಲು ಅರ್ಹ” ಎಂದು ಆ ವ್ಯಕ್ತಿಯನ್ನು ಹಾಸ್ಯ ಮಾಡಿದ್ದಾರೆ.
https://www.instagram.com/p/Cgi7lzvg5qA/?utm_source=ig_embed&utm_campaign=embed_video_watch_again