
ಸಾಮಾಜಿಕ ಮಾಧ್ಯಮ ರೆಡ್ಡಿಟ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ತುಂಬಿ ಹರಿಯುತ್ತಿರುವ ನದಿಯಲ್ಲಿ ನಾಯಿಯೊಂದು ಸಿಲುಕಿ ಒದ್ದಾಡಿದೆ. ತನ್ನ ಪ್ರಾಣ ರಕ್ಷಣೆಗೆ ಹರಸಾಹಸ ಪಡುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಶ್ವಾನದ ಸಹಾಯಕ್ಕೆ ಧಾವಿಸಿದ್ದಾರೆ.
ಎತ್ತರದ ಪ್ಲಾಟ್‌ಫಾರ್ಮ್‌ನ ಕೆಳಭಾಗದಲ್ಲಿ ನಾಯಿ ಸಿಲುಕಿಕೊಂಡಿತ್ತು. ತನ್ನ ಕೋಟ್ ತೆಗೆದ ವ್ಯಕ್ತಿ ನಾಯಿಯನ್ನು ರಕ್ಷಿಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಮತ್ತೊಬ್ಬ ವ್ಯಕ್ತಿ ನಾಯಿಗೆ ಸಹಾಯ ಮಾಡುತ್ತಿರುವ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ್ದಾನೆ. ತಮ್ಮಿಬ್ಬರ ಪ್ರಯತ್ನಗಳ ನಂತರ, ಇಬ್ಬರೂ ನಾಯಿಯನ್ನು ಸುರಕ್ಷಿತವಾಗಿ ಹಿಡಿದು ಎಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಗಳಿಬ್ಬರು ಮತ್ತು ನಾಯಿ ಮದುವೆಯ ಸ್ಥಳದತ್ತ ಹೋಗುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, 62,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ ವ್ಯಕ್ತಿಯ ಮಾನವೀಯತೆಗೆ ನೆಟ್ಟಿಗರು ಹಾಡಿ ಹೊಗಳಿದ್ದಾರೆ.