ನವದೆಹಲಿ: ಒಂದೆಡೆ ಸಾವು ಬದುಕಿನ ನಡುವೆ ಹೋರಾಟ, ಮತ್ತೊಂದೆಡೆ ತುತ್ತು ಅನ್ನ ಗಳಿಸಲು ಹೋರಾಟ. ಆದರೆ ಆ ವ್ಯಕ್ತಿಗೆ ತನ್ನ ಜೀವದ ಬಗ್ಗೆ ಗ್ಯಾರಂಟಿ ತಿಳಿದಿಲ್ಲ. ಆದರೆ ಅವರ ಸಕಾರಾತ್ಮಕ ಯೋಚನೆ ಸಂದರ್ಶನಗಳನ್ನು ನಿರ್ವಹಿಸಲು, ಉದ್ಯೋಗ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದೆ.
ಹೌದು ಇಂತಹ ಫೋಟೋ ಹಾಗೂ ವ್ಯಕ್ತಿಯ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಶ್ ನಂದನ್ ಪ್ರಸಾದ್ ಅವರ ಪ್ರೊಫೈಲ್ ಚಿತ್ರವು ನೆಟ್ವರ್ಕಿಂಗ್ ಸೈಟ್ನಲ್ಲಿ #OpenToWork ಬ್ಯಾಡ್ಜ್ ಹೊಂದಿದೆ. ಇದರಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ ಕಿಂಚಿತ್ತೂ ಉತ್ಸಾಹ ಕುಂದಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಕೇವಲ ಮೂರು ದಿನಗಳಲ್ಲಿ 88,000 ಕ್ಕೂ ಹೆಚ್ಚು ಲೈಕ್ ಗಳು ಮತ್ತು 3,000 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಸಂಗ್ರಹಿಸಿರುವ ಪೋಸ್ಟ್ನಲ್ಲಿ, ಒಬ್ಬ ವ್ಯಕ್ತಿಯು ಸಂದರ್ಶನಕ್ಕೆ ಹಾಜರಾಗುತ್ತಿರುವುದನ್ನು ಕಾಣಬಹುದಾಗಿದೆ.
ಕಾಕ್ ಪಿಟ್ ನಲ್ಲಿ ಕುಳಿತು ಮತ್ತೆ ವಿಮಾನ ಹಾರಿಸಿದ 99ರ ವೃದ್ಧೆ…!
“ನನಗೆ ನಿಮ್ಮ ಸಹಾನುಭೂತಿ ಬೇಕಿಲ್ಲ….!! ನಾನು ಏನು ಎಂಬುದನ್ನು ಸಾಬೀತುಪಡಿಸಲು ನಾನು ಇಲ್ಲಿದ್ದೇನೆ. ನನ್ನ ಕೀಮೋಥೆರಪಿ ಅವಧಿಯ ಸಮಯದಲ್ಲಿ ನಾನು ಸಂದರ್ಶನವನ್ನು ನೀಡುತ್ತಿರುವ ಇತ್ತೀಚಿನ ಚಿತ್ರ ʼʼಎಂದು ಆರ್ಶ್ ಬರೆದುಕೊಂಡಿದ್ದರು.
ಇದನ್ನು ನೋಡಿ “ಹಾಯ್ ಅರ್ಶ್! ನೀನು ಯೋಧ. ನಿಮ್ಮ ಚಿಕಿತ್ಸೆಯ ಸಮಯದಲ್ಲಿ ಸಂದರ್ಶನಗಳಿಗೆ ಹಾಜರಾಗುವುದನ್ನು ನಿಲ್ಲಿಸಿ. ನಾನು ನಿಮ್ಮ ಎಲ್ಲಾ ಕಾರ್ಯಗಳನ್ನು ಪರಿಶೀಲಿಸಿದ್ದೇನೆ, ಅವು ತುಂಬಾ ಸಮರ್ಪಕವಾಗಿದೆ. ನೀವು ಯಾವಾಗ ಬೇಕಾದರೂ ನಮ್ಮೊಂದಿಗೆ ಸೇರಿಕೊಳ್ಳಬಹುದು. ಯಾವುದೇ ಸಂದರ್ಶನ ಇರುವುದಿಲ್ಲ ಎಂದು ಕಂಪನಿಯೊಂದರ CEO ಮತ್ತು ಸಂಸ್ಥಾಪಕರಾದ ನಿಲೇಶ್ ಸತ್ಪುಟೆ ಹೇಳಿದ್ದಾರೆ.
ಇವರ ಪೋಸ್ಟನ್ನು ಓದಿದ ನೆಟ್ಟಿಗರು ನಿಮ್ಮಂತಹ ಕೆಲಸಗಾರರನ್ನು ಪಡೆಯಲು ಕಂಪೆನಿ ಅದೃಷ್ಟ ಮಾಡಿರಬೇಕು ಎಂದು ಹೇಳಿದ್ದಾರೆ.