![Man sings traditional Monpa song, plays dramyin in beautiful video shared by Arunachal Pradesh CM. Watch - Trending News News](https://akm-img-a-in.tosshub.com/indiatoday/images/story/202202/sapm.jpg?EWw3ucRgNFjaeGZgZkqjVNvRQ8L3yFbE&size=770:433)
ಸಾಂಪ್ರದಾಯಿಕ ಮೊನ್ಪಾ ಹಾಡನ್ನು ಹಾಡಿರುವ ವ್ಯಕ್ತಿ ಡ್ರಾಮಿನ್ ಸಾಧನವನ್ನು ನುಡಿಸಿದ್ದಾರೆ. ವ್ಯಕ್ತಿಯ ಹಿಂದೆ ಸುಂದರವಾದ ಗುಡ್ಡಗಾಡು ಪ್ರದೇಶವಿದ್ದು, ಅದರ ಮುಂದೆ ನಿಂತ ವ್ಯಕ್ತಿಯು ಸಾಂಪ್ರದಾಯಿಕ ಉಡುಪು ಧರಿಸಿದ್ದಾರೆ. ಈ ಅದ್ಭುತ ವಿಡಿಯೋವನ್ನು ಅರುಣಾಚಲ ಪ್ರದೇಶದ ಸಿಎಂ ಹಂಚಿಕೊಂಡಿದ್ದಾರೆ.
ರೋಡ್ ಶೋ ವೇಳೆ ಬಾಲಕಿಯತ್ತ ಹಾರ ಎಸೆದ ಕೇಂದ್ರ ಸಚಿವ ಅನುರಾಗ್ ಠಾಕೂರ್: ವಿಡಿಯೋ ವೈರಲ್
ಇಂದು ತವಾಂಗ್ ಜಿಲ್ಲೆಯ ಬೊಂಗ್ಲೆಂಗ್ ಹಳ್ಳಿಯಲ್ಲಿ ಭೂತಾನ್ ಗಡಿಯ ಬಳಿಯ ಮೊನ್ಪಾ ಇನ್ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ ಕಲಾವಿದರೊಬ್ಬರು, ಸಾಂಪ್ರದಾಯಿಕ ಸಂಗೀತ ವಾದ್ಯವಾದ ಡ್ರಾಮೈನ್ ಅನ್ನು ನುಡಿಸುತ್ತಾ ಸುಮಧುರವಾದ ಮೊನ್ಪಾ ಹಾಡನ್ನು ಪ್ರಸ್ತುತಪಡಿಸುತ್ತಾರೆ ಎಂದು ಶೀರ್ಷಿಕೆ ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಸಾವಿರಾರು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ಕಲಾವಿದನ ಸುಂದರವಾದ ಟ್ಯೂನ್‌ಗೆ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.