ಇಂಡಿಯನ್ ಐಡಲ್ ಹಿಂದಿ ಕಿರುತೆರೆಯ ಜನಪ್ರಿಯ ಗಾಯನ ಕಾರ್ಯಕ್ರಮ. ಎಲೆ ಮರೆ ಕಾಯಿಯಂತಿರುವ ಗಾಯಕರಿಗೆ ಈ ಕಾರ್ಯಕ್ರಮ ವೇದಿಕೆಯಾಗಿದೆ. ಒಂದು ಬಾರಿ ಈ ಇಂಡಿಯನ್ ಐಡಲ್ ಗೆದ್ದರೆ ಸಾಕು ನೇಮ್-ಫೇಮ್ ಇದರ ಜೊತೆಗೆ ಅವಕಾಶಗಳ ಸುರಿಮಳೆ ಆಗುತ್ತೆ, ಇದೇ ನಂಬಿಕೆಯಿಂದ ಜನರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬರುತ್ತಾರೆ. ಹೀಗೆ ಬಂದವರ ಅದೃಷ್ಟ ಕೈ ಹಿಡಿದರೆ ಇನ್ನೂ ಕೆಲವರು ಕಾಮಿಡಿ ಪೀಸ್ ಗಳಾಗಿ ಬಿಡುತ್ತಾರೆ. ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗ್ತಾ ಇದೆ.
ಇದು ಅನು ಮಲಿಕ್, ಫರಾ ಖಾನ್, ಸೋನು ನಿಗಂ ತೀರ್ಪಗಾರರಾಗಿದ್ದ ಸಮಯ. ಈ ಇಂಡಿಯನ್ ಐಡಿಯಲ್ ಆಡಿಶನ್ ಕೊಡಲು ಬಂದ ಯುವಕ ಹಿಮೇಶ್ ರೇಶಿಮಿಯಾ ಹಾಡಿದ್ದ “ಆಶಿಕ್ ಬನಾಯಾ ಆಪನೆ“ ಹಾಡನ್ನ ಹಾಡುತ್ತಾನೆ. ಆತ ಹಾಡು ಹೇಳಿದ್ದೇ ಸಖತ್ ಫನ್ನಿಯಾಗಿತ್ತು. ಆತ ಹಾಡೋದಕ್ಕೆ ಶುರು ಮಾಡಿದ್ದೇ ತಡ, ತೀರ್ಪುಗಾರರು ಶಾಕ್ ಆಗಿ ಬಿಡುತ್ತಾರೆ. ಅನು ಮಲಿಕ್ ಆತನ ಹಾಡನ್ನ ಕೇಳಿ ರೇಗಿದ್ರೆ, ಫರಾ ಖಾನ್ ಫುಲ್ ಶಾಕ್ ಆಗಿರ್ತಾರೆ.ಇನ್ನೂ ಸೋನು ನಿಗಂ ಆ ಯುವಕನನ್ನ ಇನ್ನಷ್ಟು ಕಿಚಾಯಿಸುತ್ತಾರೆ. ಆದರೂ ಆ ಯುವಕ ಹಾಡುವುದನ್ನ ಮಾತ್ರ ನಿಲ್ಲಿಸುವುದಿಲ್ಲ.
ಆಡಿಶನ್ ಸಮಯದಲ್ಲಿ ಈ ರೀತಿ ಘಟನೆಗಳಾಗುವುದು ಸಹಜ. ತಾವು ಸುಶ್ರಾವ್ಯವಾಗಿ ಹಾಡ್ತೇವೆ ಅಂತ ಹೇಳಿ ಬರುವ ಗಾಯಕರ ಹಾಡುವ ಕೇಳೋಕೆ ಆಗದಷ್ಟು ಕರ್ಕಶವಾಗಿರುತ್ತೆ. ತೀರ್ಪುಗಾರರು ಅಂತಹ ಹಾಡನ್ನ ಕೇಳಿ ತಾಳ್ಮೆ ಕಳೆದುಕೊಂಡು, ಆಡಿಶನ್ಗೆ ಬಂದವರ ಮೇಲೆ ರೇಗಿ ಬಿಡುತ್ತಾರೆ. ಅದನ್ನ ಈ ವಿಡಿಯೋದಲ್ಲೂ ಗಮನಿಸಬಹುದು.
ಈಗ ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ಈ ವಿಡಿಯೋ ನೋಡಿ ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ಅಮಾಯಕರ ಜೊತೆ ತೀರ್ಪುಗಾರರು ವ್ಯವಹರಿಸಿದ್ದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಏನೇ ಅನ್ನಿ ಇಲ್ಲಿ ಈ ಯುವಕ ಹಾಡಿದ್ದ ರೀತಿ ನೋಡ್ತಿದ್ರೆ ಎಂಥವರು ಕೂಡಾ ನಗಲಾರದೇ ಇರಲಾರರು ಅನ್ನೊದಂತೂ ನಿಜ.