ಕೊಟ್ಟಾಯಂ: ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಆಸ್ತಿ ವಿಚಾರವಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಕೇರಳದ ಕೊಟ್ಟಾಯಂ ನಲ್ಲಿ ನಡೆದಿದೆ.
ಜಾರ್ಜ್ ಕುರಿಯನ್ ಎಂಬಾತ ತನ್ನ ಅಣ್ಣ ರಂಜು ಕುರಿಯನ್ ತಲೆಗೆ ಗುಂಡಿಟ್ಟು ಹತ್ಯೆಗೈದಿದ್ದಾನೆ. ಕೃತ್ಯ ತಡೆಯಲು ಮುಂದಾದ ಸೋದರ ಮಾವ ಮ್ಯಾಥ್ಯೂ ಸ್ಕೇರಿಯಾಗೂ ಬುಲೆಟ್ ತಗುಲಿದೆ.
ಗಾಯಾಳುವನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಆರೋಪಿ ಜಾರ್ಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.