ನೀವು ರಸ್ತೆಯಲ್ಲಿ ನಡೆಯುತ್ತಾ ಮುಂದೆ ಸಾಗುತ್ತಿರಬೇಕಾದ್ರೆ ಒಂದೊಮ್ಮೆ ಫುಟ್ ಪಾತ್ ಅಥವಾ ರಸ್ತೆ ಕುಸಿಯಿತು ಎಂದರೆ ಒಂದುಕ್ಷಣ ನಿಮ್ಮ ಹೃದಯ ಧಸಕ್ಕನ್ನಬಹುದು ಅಲ್ವಾ….. ಇದೀಗ ಇಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಅಪಘಾತದಿಂದ ಪಾರಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ಅಂಗಡಿಯೊಂದರ ಕಡೆಗೆ ಹೋಗುತ್ತಿರುವುದು ಕಂಡು ಬಂದಿದೆ. ಆದರೆ, ಅವರು ಪ್ರವೇಶಿಸಲು ಮುಂದಾದ ತಕ್ಷಣ, ಅವರು ಸೆಕೆಂಡ್‌ಗಳ ಹಿಂದೆ ನಿಂತಿದ್ದ ಫುಟ್‌ಪಾತ್ ಬಿರುಕು ಬಿಟ್ಟು ಕೆಳಗೆ ಬಿದ್ದಿದೆ. ಸ್ವಲ್ಪದರಲ್ಲೇ ವ್ಯಕ್ತಿಯು ಚರಂಡಿಗೆ ಬೀಳುವುದರಿಂದ ಪಾರಾಗಿದ್ದಾರೆ.
ಸದ್ಯ, ಈ ವಿಡಿಯೋ ಆನ್ಲೈನ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಇದು ತನ್ನಲ್ಲಿ ಹೊಸ ಭಯವನ್ನು ಹುಟ್ಟುಹಾಕಿದೆ. ಇನ್ಮುಂದೆ ರಸ್ತೆಯಲ್ಲಿ ನಡೆಯಬೇಕಾದ್ರೂ ಬಹಳ ಜಾಗರೂಕರಾಗಿರಬೇಕು ಅಂತಾ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.