ತಲೆತಿರುಗಿಸುತ್ತೆ ಈ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ…..! 11-11-2021 11:58AM IST / No Comments / Posted In: Latest News, India, Live News ಕೆಲವು ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿದರೆ ದುಬಾರಿ ಶುಲ್ಕವನ್ನು ವಿಧಿಸಲಾಗುತ್ತದೆ. ಹೈದರಾಬಾದ್ನ ಸಿಕಂದರಾಬಾದ್ನಲ್ಲಿರುವ ರೈಲು ನಿಲ್ದಾಣದಲ್ಲಿ ಮಾತ್ರ ಪಾರ್ಕಿಂಗ್ ಶುಲ್ಕ ನಿಮ್ಮ ತಲೆ ತಿರುಗಿಸೋದು ಗ್ಯಾರಂಟಿ…! ರೆಡಿಟ್ನಲ್ಲಿ ಪಾರ್ಕಿಂಗ್ ಶುಲ್ಕದ ರಶೀದಿಯನ್ನು ವ್ಯಕ್ತಿಯೊಬ್ಬರು ಶೇರ್ ಮಾಡಿದ್ದಾರೆ, 30 ನಿಮಿಷ ವಾಹನ ಪಾರ್ಕ್ ಮಾಡಿದ್ದಕ್ಕೆ ಹೈದರಾಬಾದ್ನ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ವಿಧಿಸಲಾದ ಪಾರ್ಕಿಂಗ್ ಶುಲ್ಕ ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಇಲ್ಲಿ ನೀವು 8 ನಿಮಿಷಕ್ಕಿಂತ ಹೆಚ್ಚು ಕಾಲ ವಾಹನವನ್ನು ಪಾರ್ಕ್ ಮಾಡಿದರೆ, ನಿಮಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಸಾಮಾನ್ಯವಾಗಿ 2 ಗಂಟೆ ಅವಧಿಗೆ ನಾಲ್ಕು ಚಕ್ರದ ವಾಹನಗಳಿಗೆ 50 ರೂಪಾಯಿ ಹಾಗೂ ಎರಡು ಚಕ್ರದ ವಾಹನಗಳಿಗೆ 15 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಇದಾದ ಬಳಿಕ ಪ್ರತಿ ಗಂಟೆಗೆ ಕ್ರಮವಾಗಿ 25 ಹಾಗೂ 10 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಅತಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದ ಕಾರಣ 2019ರಿಂದ ಈ ರೀತಿ ದುಬಾರಿ ದಂಡ ವಿಧಿಸುವ ಪ್ರಕ್ರಿಯೆ ಜಾರಿಗೆ ತರಲಾಗಿದೆ. ಈ ರೀತಿ ದುಬಾರಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಮೊದಲು ಏರ್ಪೋರ್ಟ್ಗಳಲ್ಲಿ ತರಲಾಗಿತ್ತು. ಅತಿಯಾದ ವಾಹನ ದಟ್ಟಣೆ ಉಂಟಾಗುವ ಹಿನ್ನೆಲೆಯಲ್ಲಿ ಈ ರೀತಿ ದುಬಾರಿ ದಂಡ ವಿಧಿಸಲಾಗುತ್ತದೆ. Parking cost slip at Secunderabad railway station in Hyderabad for 30 mins. [More details in comment] byu/SacredBullshit inindia