ವಿಚಿತ್ರ ಘಟನೆಯೊಂದರಲ್ಲಿ ಮುಂಬೈನಿಂದ ಲಕ್ನೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಐ ಆರ್ ಸಿ ಟಿ ಸಿ ಪ್ಯಾಂಟ್ರಿಯಿಂದ ಡೆಲಿವರಿ ಮಾಡಿದ ಸಮೋಸಾದಲ್ಲಿ “ಹಳದಿ ಪೇಪರ್” ಕಂಡುಬಂದಿದೆ.
ಆ ಪ್ರಯಾಣಿಕ ಸಮೋಸಾ ಮತ್ತು ಹಳದಿ ಪೇಪರ್ ಚಿತ್ರಗಳನ್ನು ಸಾಮಾಜಿಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸ್ನ್ಯಾಕ್ಸ್ ತಯಾರಿಸುವಾಗ ಹಿಟ್ಟಿನೊಂದಿಗೆ ಪೇಪರ್ ಬೆರೆತಿರಬಹುದೆಂದು ತೋರುತ್ತದೆ.
ಈ ಸಮೋಸವನ್ನು ಐಆರ್‌ಸಿಟಿಸಿ ಪ್ಯಾಂಟ್ರಿಯಲ್ಲಿ 9-10-22 ಬೆಳಿಗ್ಗೆ 10:15ರ ಸುಮಾರಿಗೆ ಖರೀದಿಸಿದೆ. ಪ್ರಯಾಣಿಕರಿಗೆ ವಿತರಿಸುವ ಆಹಾರಕ್ಕಾಗಿ ನಾನು ಐ ಆರ್ ಸಿ ಟಿ ಸಿ ಗೆ ಸೆಲ್ಯೂಟ್ ಮಾಡುತ್ತೇನೆ ಎಂದು ಅವರು ಶೀರ್ಷಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೂರಿಗೆ ಪ್ರತಿಕ್ರಿಯಿಸಿದ ಐ ಆರ್ ಸಿ ಟಿ ಸಿ “ಸರ್, ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ದಯವಿಟ್ಟು ಪಿಎನ್ ಆರ್ ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ ಎಂದು ಕೋರಿದೆ.
ಕ್ಷಮೆಯಾಚಿಸಿದ ಹೊರತಾಗಿಯೂ ನೆಟ್ಟಿಗರು ಟೀಕಿಸಿದ್ದು, ರೈಲ್ವೆ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಎಲ್ಲವೂ ಹದಗೆಡುತ್ತಿದೆ ಮತ್ತು ಮುಖ್ಯವಾಗಿ ಅವರು ಎಲ್ಲದಕ್ಕೂ ಶುಲ್ಕ ವಿಧಿಸುವಂತೆಯೇ ಹಣವನ್ನು ವಿಧಿಸುತ್ತಾರೆ, ಬಡವರ ಪರಿಸ್ಥಿತಿ ಏನೆಂದು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.