ಮುಂಬೈ: ಮುಂಬೈನ ದಾದರ್ ನಲ್ಲಿ ರೈಲ್ವೆ ಉದ್ಯೋಗಿಯೊಬ್ಬರು 75,000 ರೂಪಾಯಿ ಕಳೆದುಕೊಂಡಿದ್ದಾರೆ. ಡೆಬಿಟ್ ಕಾರ್ಡ್ ಪಿನ್ ಆಗಿ ಜನ್ಮದಿನಾಂಕವನ್ನು ಬಳಸಿ ರಚಿಸುವುದೇ ದುಬಾರಿಯಾಗಿ ಪರಿಣಮಿಸಿದೆ.
ಲೋಕೇಂದ್ರ ಚೌಧರಿ ಅವರು ಹಣ ಕಳೆದುಕೊಂಡವರು. ಜನವರಿ 20 ರಂದು ಸ್ಥಳೀಯ ರೈಲಿನಲ್ಲಿ ಥಾಣೆಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆರೋಪಿಯನ್ನು ಜಿಮ್ ಸುಡಾನ್(28) ಎಂದು ಗುರುತಿಸಲಾಗಿದೆ, ಚೌಧರಿ ಅವರ ಬ್ಯಾಗ್ ಕದ್ದ ಜಿಮ್ ಸುಡಾನ್ ದಾದರ್ ನಿಲ್ದಾಣದಲ್ಲಿ ರೈಲು ಬದಲಿಸಿದ್ದಾರೆ.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿದ್ದ ಸಂತ್ರಸ್ತ ಚೌಧರಿಯ ವ್ಯಾಲೆಟ್ ಕದ್ದಿದ್ದ. ಚೌಧರಿ ಅವರು ತಮ್ಮ ಜನ್ಮ ದಿನಾಂಕವನ್ನು ಎಟಿಎಂ ಪಿನ್ ಆಗಿ ಬಳಸುತ್ತಿದ್ದರು. ಅವರ ಬ್ಯಾಂಕ್ ಖಾತೆಯಿಂದ ಸುಡಾನ್ ಹಣ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚೌಧರಿ ಅವರು ಥಾಣೆ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ. ಚೌಧರಿ ಅವರು ಹಣ ಹಿಂಪಡೆದಿರುವ ಬಗ್ಗೆ ಮತ್ತು ಅದರ ಸ್ಥಳದ ಕುರಿತು ತಮ್ಮ ಬ್ಯಾಂಕ್ ನಿಂದ ಪಠ್ಯ ಸಂದೇಶ ಸ್ವೀಕರಿಸುತ್ತಾರೆ ಎಂದು ಅವರು ತಿಳಿದಿದ್ದರು. ಆದ್ದರಿಂದ, ಆತ ಮೂರು ಎಟಿಎಂ ಕಿಯೋಸ್ಕ್ ಗಳಿಗೆ ಹೋಗಿ ಸಿಕ್ಕಿ ಬೀಳುವುದನ್ನು ತಪ್ಪಿಸಲು ಒಟ್ಟು 50,000 ರೂ.ಗಳನ್ನು ಹಿಂತೆಗೆದುಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಡಾನ್ ಕೂಡ ಮಾಹಿಮ್‌ನಲ್ಲಿರುವ ಆಭರಣ ಮಳಿಗೆಗೆ ಹೋಗಿ ಚೌಧರಿ ಕಾರ್ಡ್ ಬಳಸಿ 25,000 ರೂಪಾಯಿ ಮೌಲ್ಯದ ಚಿನ್ನದ ಉಂಗುರ ಖರೀದಿಸಿದ್ದಾನೆ. ಚೌಧರಿ ಅವರ ಕಾರ್ಡ್-ಸ್ವೈಪಿಂಗ್ ಇತಿಹಾಸ ಪರಿಶೀಲಿಸಿದ ಪೊಲೀಸರು ಆಭರಣ ಅಂಗಡಿ ತಲುಪಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಅಂಗಡಿಯಿಂದ ಹೊರಬಂದ ನಂತರ ಸುಡಾನ್ ಕ್ಯಾಬ್ ತೆಗೆದುಕೊಂಡಿದ್ದಾನೆ ಎನ್ನುವುದು ಗೊತ್ತಾಗಿದೆ.
ವಿಚಾರಿಸಿದಾಗ ಬಾಂದ್ರಾಕ್ಕೆ ಕ್ಯಾಬ್ ಬಾಡಿಗೆಗೆ ಪಡೆದಿದ್ದ ಎನ್ನುವುದು ತಿಳಿದಿದ್ದು, ಅಲ್ಲಿ ತಾನು ವಾಸಿಸುತ್ತಿದ್ದ ವಸತಿ ನಿಲಯ ತಲುಪಲು ಆಟೋರಿಕ್ಷಾ ಹತ್ತಿದ ಎನ್ನುವುದು ವಿಚಾರಣೆ ನಡೆಸಿದ ಪೊಲೀಸರಿಗೆ ಗೊತ್ತಾಗಿದೆ. ಕೊನೆಗೂ ಆತನನ್ನು ಬಂಧಿಸಲಾಗಿದೆ. ಆರೋಪಿ ಆನ್ ಲೈನ್ ರಮ್ಮಿ ಆಡಿ, ಕದ್ದ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.