ಪತ್ನಿಯ ಶೀಲ ಶಂಕಿಸಿ ಕೊಂದಾತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿರುವ ಪ್ರಕರಣ ಮುಂಬೈನಲ್ಲಿ ನಡೆದಿದೆ.
2017ರಲ್ಲಿ ಮಧ್ಯರಾತ್ರಿ ಆರೋಪಿ ಅಖ್ತರ್ ಖಾನ್ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ, ಪ್ರಕರಣ ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.
ಒಂದು ಸಂದರ್ಭದಲ್ಲಿ ಹಿಂದುವಾಗಿದ್ದರೂ ಅಖ್ತರ್ ಖಾನ್ ಕುಟುಂಬಕ್ಕೆ ಮತಾಂತರಗೊಂಡಿದ್ದ. ಖಾನ್ ತನ್ನ ಪತ್ನಿಯ ಚಾರಿತ್ರ್ಯವನ್ನು ಅನುಮಾನಿಸಿ ಆಕೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಮತ್ತು ಮದ್ಯದ ಅಮಲಿನಲ್ಲಿ ಆಕೆಯನ್ನು ಹೊಡೆಯುತ್ತಿದ್ದನು ಎಂದು ಕುಟುಂಬದವರು ಆರೋಪಿಸಿದ್ದರು.
BREAKING NEWS: ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ನಿಧನ
ಜೂನ್ 13, 2017ರಂದು, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿತ್ತು. ಹಾಗೆಯೇ ಮಧ್ಯರಾತ್ರಿಯ ನಂತರ ಜಗಳ ತೀವ್ರಗೊಂಡಿತು. ಈ ವೇಳೆ ಪತ್ನಿಯನ್ನು ಇರಿದು ಕೊಂದಿದ್ದ. ನೆರೆಯ ಮನೆಯ ವಾಸಿಗಳಾದ ಕುಟುಂಬದವರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.