![](https://kannadadunia.com/wp-content/uploads/2023/06/31f31974-c3b1-4ef5-9c36-a6bed310d29c.jpg)
ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿ ನಟ ಸೋನು ಸೂದ್ ಅಭಿಮಾನಿಗಳಿಂದ ರಿಯಲ್ ಹಿರೋ ಎಂದೆನಿಸಿಕೊಂಡಿದ್ದಾರೆ. ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕೇಳುವ ಪ್ರಶ್ನೆ, ತರ್ಲೆ ಮನವಿಗಳಿಗೆ ನೀಡುವ ತಮ್ಮ ಉತ್ತರದಿಂದ ಅವರು ಗಮನ ಸೆಳೆಯುತ್ತಾರೆ. ಇದೀಗ ಅಂಥದ್ದೇ ಮತ್ತೊಂದು ಮನವಿಗೆ ಸೋನು ಸೂದ್ ನೀಡಿರುವ ಪ್ರತಿಕ್ರಿಯೆ ಗಮನ ಸೆಳೆದಿದೆ.
ಟ್ವಿಟ್ಟರ್ ಬಳಕೆದಾರರಾದ ಆರವ್ ಕೆ ಚೌಧರಿ ಅವರು ಅಮೆರಿಕ ಮೂಲಕ ಗಾಯಕಿ, ನಟಿ ಸೆಲೀನಾ ಗೋಮ್ಸ್ ಅವರನ್ನು ಮದುವೆಯಾಗಲು ಬಯಸುತ್ತಿದ್ದು ಅದಕ್ಕಾಗಿ ಸಹಾಯ ಮಾಡಿ ಎಂದು ಸೋನು ಸೂದ್ ರನ್ನ ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಸೋನು ಸೂದ್ “ಮಗುವೇ, ಈಗ ನೀನು ನನ್ನನ್ನು ನಟನೆ ನಿಲ್ಲಿಸಿ ಮ್ಯಾರೇಜ್ ಬ್ಯೂರೋ ತೆರೆಯುವಂತೆ ಮಾಡಲು ಹೊರಟಿದ್ದೀಯ” ಎಂದಿದ್ದಾರೆ. ಸೋನು ಸೂದ್ ರವರ ಈ ತ್ವರಿತ ಪ್ರತಿಕ್ರಿಯೆಗೆ ನೆಟ್ಟಿಗರು ನಗುತ್ತಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.