ಆರೋಗ್ಯವಂತ ಮನುಷ್ಯ ದಿನಕ್ಕೆ 7 ಗಂಟೆ ನಿದ್ರಿಸಬೇಕು ಎಂದು ವಿಜ್ಞಾನ ಹೇಳುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ರಿಸುತ್ತಿದ್ದು ಕಳೆದ 12 ವರ್ಷಗಳಿಂದಲೂ ನಾನು ಆರಾಮಾಗಿಯೇ ಇದ್ದೇನೆ ಎಂದು ಹೇಳಿದ್ದಾನೆ. ಜಪಾನ್ನ 36 ವರ್ಷದ ಡೈಸುಕೆ ಹೋರಿ ಇಂತಹದ್ದೊಂದು ವಿಚಿತ್ರ ನಿದ್ರಾ ಅಭ್ಯಾಸವನ್ನು ಹೊಂದಿದ್ದಾನೆ.
ಡೈಸುಕೆ ಜಪಾನ್ನ ಶಾರ್ಟ್ ಸ್ಲೀಪರ್ ಅಸೋಸಿಯೇಷನ್ನ ಚೇರ್ಮನ್ ಕೂಡ ಹೌದು. ಇವರು ಅನೇಕರಿಗೆ ಕಡಿಮೆ ಸಮಯದಲ್ಲಿ ನಿದ್ರೆ ಮಾಡುವ ತಂತ್ರವನ್ನು ಕಲಿಸುತ್ತಾರೆ.
ತಾವು ಕಡಿಮೆ ಸಮಯಗಳ ಕಾಲ ನಿದ್ರೆ ಮಾಡಲು ಕಾರಣ ಏನು ಅನ್ನೋದರ ಮಾಹಿತಿ ನೀಡಿದ ಡೈಸುಕೆ, ನನಗೆ ದಿನದಲ್ಲಿ 16 ಗಂಟೆ ತಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಕಾಗುವುದಿಲ್ಲ ಎಂಬುದು ಅರಿವಾಯಿತು. ಹೀಗಾಗಿ ನಾನು ನನ್ನ 8 ಗಂಟೆಗಳ ನಿದ್ರಾವಧಿಯನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದೆ. ಇದೀಗ ನಾನು ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ರೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅರ್ಧ ಗಂಟೆ ನಿದ್ರೆ ಮಾಡಿದರೂ ಸಹ ಡೈಸುಕೆ ಆರೋಗ್ಯವಾಗಿಯೇ ಇದ್ದಾರೆ.