
ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ನೀರಿನ ಮೇಲೆ ಓಡುತ್ತಿರುವುದನ್ನು ನೋಡಬಹುದು. ನೀರಿನಲ್ಲಿ ಈಜುವುದನ್ನು ಎಲ್ಲರೂ ನೋಡಿರುತ್ತೇವೆ. ಆದರೆ ರಭಸದಿಂದ ಹರಿಯುವ ನೀರಿನಲ್ಲಿ ಓಡುವುದು ಊಹಿಸಿಕೊಳ್ಳುವುದೂ ಕಷ್ಟ.
ಆದರೆ ಈ ವಿಡಿಯೋದಲ್ಲಿ ಯುವಕ ಅದನ್ನು ಸಾಧಿಸಿ ತೋರಿಸಿದ್ದಾರೆ. ಆತ ಅತಿವೇಗದಲ್ಲಿ ಓಡುತ್ತಿದ್ದಾಗ ದಾರಿ ಮಧ್ಯೆ ಸಮತೋಲನ ತಪ್ಪಿ ಜಾರಿ ಕೆಳಗೆ ಬೀಳುವುದನ್ನು ನೋಡಬಹುದು. ಆತ ಬಿದ್ದ ಎನ್ನುವುದು ದೊಡ್ಡ ವಿಷಯವಲ್ಲ. ಆದರೆ ಈ ವ್ಯಕ್ತಿ ಒಂದು ನಿರ್ದಿಷ್ಟ ದೂರದವರೆಗೆ ಸ್ಲೈಡ್‌ನಲ್ಲಿ ಹೇಗೆ ಓಡುತ್ತಾನೆ ಎನ್ನುವುದೇ ಅಚ್ಚರಿಯಾಗುತ್ತದೆ.
ಇದು ನಿಜಕ್ಕೂ ಬಗೆಹರಿಯಲಾಗದ ಸಮಸ್ಯೆ ಎಂದು ಹಲವರು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು 3.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.