ಒಂದು ಸೈಕಲ್ ಮೇಲೆ ಎಷ್ಟು ಮಂದಿ ಹೋಗಲು ಸಾಧ್ಯ? ಮೂರು, ನಾಲ್ಕು… ಚಿಕ್ಕ ಚಿಕ್ಕಮಕ್ಕಳಿದ್ದು ಭಾರಿ ಸರ್ಕಸ್ ಮಾಡಿದರೆ ಐದು…. ಹೂಂ… ಹೂಂ…. ಒಂದು ಸೈಕಲ್ನಲ್ಲಿ 9 ಮಂದಿ ಹೋಗಿದ್ದಾರೆ! ನಂಬಲು ಅಸಾಧ್ಯ ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ.
ಒಂಬತ್ತು ಮಕ್ಕಳನ್ನು ಒಂದೇ ಸೈಕಲ್ ಮೇಲೆ ಹೊತ್ತೊಯ್ಯುತ್ತಿದ್ದಾನೆ ಓರ್ವ ವ್ಯಕ್ತಿ. ಹಿಂಭಾಗದಲ್ಲಿ ಮುಂಭಾಗದಲ್ಲಿ ಅಲ್ಲದೆ ಭುಜವನ್ನೇರಿ, ಚಕ್ರದ ಮೇಲೆ ಹೀಗೆ ಎಲ್ಲೆಂದರಲ್ಲಿ ಚೀಲಗಳನ್ನು ಸಿಕ್ಕಿಸಿಕೊಂಡಂತೆ ಪುಟ್ಟ ಮಕ್ಕಳನ್ನು ಕೂರಿಸಿಕೊಂಡು ನಿಲ್ಲಿಸಿಕೊಂಡು ಈ ವ್ಯಕ್ತಿ ಸೈಕಲ್ ಓಡಿಸುತ್ತಿದ್ದಾನೆ.
ಸ್ವಲ್ಪ ಆಯ ತಪ್ಪಿದರೂ ಎಲ್ಲರ ಜೀವಕ್ಕೂ ಅಪಾಯ. ಆದರೆ ಅದ್ಯಾವುದನ್ನೂ ಲೆಕ್ಕಿಸದೇ ಆತ ಸೈಕಲ್ ತುಳಿಯುತ್ತಿದ್ದು, ಮಕ್ಕಳು ಆರಾಮಾಗಿ ಇದ್ದರೆ. ಇದಕ್ಕೆ ನಿನ್ನೆ ನಿನ್ನೆಗೆ, ನಾಳೆ ನಾಳೆಗೆ ಎಂಬ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಕೊಟ್ಟು ವೈರಲ್ ಮಾಡಲಾಗಿದೆ.
ಈ ವಿಡಿಯೋ ಎಲ್ಲಿಯದ್ದು ಎಂದು ತಿಳಿದಿಲ್ಲವಾದರೂ ಈ ಪರಿ ಸಾಹಸ ಮಾಡುತ್ತಿರುವ ಸವಾರನಿಗೆ ಮಾತ್ರ ಹ್ಯಾಟ್ಸ್ ಆಫ್ ಹೇಳಲೇಬೇಕು.
https://twitter.com/JaikyYadav16/status/1592438950991626241?ref_src=twsrc%5Etfw%7Ctwcamp%5Etweetembed%7Ctwterm%5E1592438950991626241%7Ctwgr%5Ec5d8f1085a8eee7c6a02db656efb2f4e29c0dce3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-rides-bicycle-with-9-children-in-bizarre-viral-video-internet-reacts-2297952-2022-11-16