ಅಮೆರಿಕದ ವ್ಯಕ್ತಿಯೊಬ್ಬ ಪತ್ನಿ ಕೆಲಸ ನೋಡಿ ಕಂಗಾಲಾಗಿದ್ದಾನೆ. ಪತ್ನಿ ಈ ಕೆಲಸ ಮಾಡ್ತಾಳೆಂದು ಆತ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ವೈದ್ಯರ ಬಳಿ ಹೋದಾಗ, ಪತ್ನಿಯ ಭಯಾನಕ ಪಿತೂರಿ ಬಹಿರಂಗವಾಗಿದೆ.
ವರದಿಯ ಪ್ರಕಾರ, 56 ವರ್ಷದ ಜೆಡಿ ಮೆಕ್ಕೇಬ್, ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ವಾಸವಾಗಿದ್ದಾನೆ. ಸತತವಾಗಿ ತೂಕ ಕಡಿಮೆಯಾಗ್ತಿದ್ದ ಕಾರಣ, ಮೆಕ್ಕೇಬ್, ವೈದ್ಯರ ಬಳಿ ಹೋಗಿದ್ದಾನೆ. ಚಿಕಿತ್ಸೆ ವೇಳೆ, ಪತ್ನಿ ಪ್ರೋಟೀನ್ ಪೌಡರ್‌ಗೆ ಆರ್ಸೆನಿಕ್ ಸೇರಿಸುತ್ತಿರುವುದು ಗೊತ್ತಾಗಿದೆ. ಇದು ವಿಷವಾಗಿದ್ದು, ಮೆಕ್ಕೇಬ್ ತೂಕ, ಕೆಲವು ತಿಂಗಳುಗಳಲ್ಲಿ 30 ಕೆಜಿ ಕಡಿಮೆಯಾಗಿತ್ತು. ಕರುಳಿನ ಸಮಸ್ಯೆ ಹಾಗೂ ಕೀಲು ನೋವು ಶುರುವಾಗಿತ್ತು.
ಮೆಕ್ಕೇಬ್ ತುಂಬಾ ದುರ್ಬಲನಾಗಿದ್ದರಿಂದ ಜನರು ಆತನನ್ನು ಕ್ಯಾನ್ಸರ್ ರೋಗಿಯೆಂದು ಭಾವಿಸಲಾರಂಭಿಸಿದ್ದರು. ಮೆಕ್ಕೇಬ್ ಪತ್ನಿ ಎರಿನ್ ಮದುವೆಯಾಗಿ 17 ವರ್ಷಗಳ ಕಾಲ ಮೆಕ್ಕೇಬ್ ಜೀವನ ಸುಖಕರವಾಗಿತ್ತಂತೆ. ಆದ್ರೆ ನಂತ್ರ ಎರಿನ್ ಬದಲಾಗಿದ್ದಳಂತೆ. ಮೆಕ್ಕೇಬ್ ನನ್ನು ವಂಚಕ, ಅತಿಯಾದ ಮದ್ಯಪಾನಿ, ಮಾದಕ ವಸ್ತು ಸೇವನೆ ಮಾಡ್ತಾನೆ, ಮಾನಸಿಕ ಅಸ್ವಸ್ಥ ಎಂದು ಆರೋಪಿಸಲು ಪ್ರಾರಂಭಿಸಿದ್ದಳಂತೆ.
ವೈದ್ಯರನ್ನು ಸಂಪರ್ಕಿಸಿದಾಗ, ಅವರು ಹೇಳಿದ ವಿಷ್ಯ, ಮೆಕ್ಕೇಬ್ ದಂಗಾಗಿಸಿತ್ತು. ಪತ್ನಿ ತನಗೆ ವಿಷ ನೀಡ್ತಾಳೆಂದು ಆತ ಭಾವಿಸಿರಲಿಲ್ಲ. ವಿಷ್ಯ ಹೊರ ಬರ್ತಿದ್ದಂತೆ ಆಕೆಗೆ ಮೆಕ್ಕೇಬ್, ವಿಚ್ಛೇದನ ನೀಡಿದ್ದಾನೆ.