ಜಗತ್ತಿನಲ್ಲಿ ಅಮಾನವೀಯವಾಗಿ ನಡೆದುಕೊಳ್ಳುವವರು ಇರುವಂತೆಯೇ ಪ್ರಾಣಿಗಳ ಬಗ್ಗೆ ಸಹಾನುಭೂತಿಯುಳ್ಳವರೂ ಕಾಣಸಿಗುತ್ತಾರೆ. ಅಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಗಾಯಗೊಂಡ ನಾಯಿಯನ್ನು ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ. ಅವರ ನಿಸ್ವಾರ್ಥ ಭಾವವು ಅಂತರ್ಜಾಲದಲ್ಲಿ ಹೃದಯಗಳನ್ನು ಗೆದ್ದಿದೆ.
ವೀಡಿಯೊವನ್ನು ಕಾರ್ತವ್ಯ ಸೊಸೈಟಿ ಎಂಬ ಪುಟದಿಂದ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ನಾಯಿ ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಪುರುಷ ಮತ್ತು ಮಹಿಳೆ ಜನನಿಬಿಡ ರಸ್ತೆಯ ಬದಿಯಲ್ಲಿ ಗಾಡಿಯನ್ನು ನಿಲ್ಲಿಸಿದರು. ಮಧ್ಯರಸ್ತೆಯಲ್ಲಿ ನಾಯಿ ಬಿದ್ದಿದ್ದರೂ, ಅದನ್ನು ಯಾರೂ ಗಮನಿಸಿರಲಿಲ್ಲ.
ಈ ದಂಪತಿ ಕಾರಿನಿಂದ ಇಳಿದು ಹೋಗಿದ್ದಾರೆ. ನಾಯಿ ಸತ್ತಿದೆ ಎಂದು ಭಾವಿಸಿದ ಇಬ್ಬರೂ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದರು. ಆದರೆ, ಆ ವ್ಯಕ್ತಿ ಹತ್ತಿರ ಬಂದಾಗ, ನಾಯಿ ಜೀವಂತವಾಗಿರುವುದನ್ನು ಗಮನಿಸಿದರು. ನಂತರ ಅದನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಪಶುವೈದ್ಯರ ಚಿಕಿತ್ಸಾಲಯಕ್ಕೆ ಧಾವಿಸಿದ್ದಾರೆ.
ಬಡ ನಾಯಿ ತಲೆಗೆ ಗಾಯವಾಗಿ ಪ್ರಜ್ಞಾಹೀನವಾಗಿತ್ತು ಮತ್ತು ರಕ್ತಸ್ರಾವವೂ ಆಗಿತ್ತು. ಪರಾಗ್ ಪಾಂಡ್ಯ ಎಂಬ ಪಶುವೈದ್ಯರು ಸೂಕ್ತ ಪರೀಕ್ಷೆಯ ನಂತರ ಚಿಕಿತ್ಸೆ ನೀಡಿದರು. ಮತ್ತು ಅದೃಷ್ಟವಶಾತ್, ನಾಯಿ ಚೇತರಿಸಿಕೊಂಡಿತು. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 10 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ದಂಪತಿಯ ನಿಸ್ವಾರ್ಥ ಮತ್ತು ದಯೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ಅವರ ಪ್ರೀತಿಯನ್ನು ಸುರಿಸಿದ್ದಾರೆ.
https://youtu.be/_uv1NumPqG4