alex Certify ʼಆನ್ ​ಲೈನ್ʼ​ನಲ್ಲಿ ಫುಡ್​ ಆರ್ಡರ್​ ಮಾಡಿದವನ ಮನೆ ಬಾಗಿಲಿಗೆ ಬಂತು ಮೂತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆನ್ ​ಲೈನ್ʼ​ನಲ್ಲಿ ಫುಡ್​ ಆರ್ಡರ್​ ಮಾಡಿದವನ ಮನೆ ಬಾಗಿಲಿಗೆ ಬಂತು ಮೂತ್ರ….!

ಫುಡ್​ ಆರ್ಡರ್​ ಮಾಡಿದ್ದ ಬ್ರಿಟನ್​​ನ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ಹಳದಿ ಬಣ್ಣದ ದ್ರವವೊಂದನ್ನ ತುಂಬಿರೋದನ್ನ ಕಂಡು ಶಾಕ್​ ಆಗಿದ್ದಾರೆ. ಕೊಕೊ ಕೋಲಾ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಬಾಟಲಿಯಲ್ಲಿ ಮೂತ್ರವನ್ನ ತುಂಬಿಸಿಕೊಡಲಾಗಿದೆ ಎಂಬ ವಿಚಾರ ಬಳಿಕ ಬೆಳಕಿಗೆ ಬಂದಿದೆ.

ಒಲಿವರ್​​ ಮ್ಯಾಕ್​ಮ್ಯಾನಸ್​ ಹೆಲ್ಲೋ ಫ್ರೆಶ್​ ಎಂಬಲ್ಲಿ ಊಟವನ್ನ ಬುಕ್​ ಮಾಡಿದ್ದರು. ಈ ವೇಳೆ ಕೊಕೊ ಕೋಲಾ ಬಾಟಲಿಯನ್ನೂ ಒಲಿವರ್​ ಬುಕ್​ ಮಾಡಿದ್ದರು. ಈ ವಿಚಾರವಾಗಿ ಟ್ವೀಟ್​ ಮಾಡಿರುವ ಒಲಿವರ್​, ನನಗೆ ಆರ್ಡರ್​ ಜೊತೆಯಲ್ಲಿ ಯಾರದ್ದೋ ಮೂತ್ರವನ್ನ ಏಕೆ ಕಳುಹಿಸಿಕೊಟ್ಟಿದ್ದೀರಾ..? ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ನೆಟ್ಟಿಗರೊಬ್ಬರು ಸೇಬು ಹಣ್ಣಿನ ಜ್ಯೂಸ್​ ಇರಬಹುದು ಎಂದು ಊಹಿಸಿದ್ದಾರೆ. ಆದರೆ ಈ ಕಮೆಂಟ್​ಗೆ ಪ್ರತಿಕ್ರಿಯಿಸಿರುವ ಆಲಿವರ್, ನಿಮ್ಮ ಮನೆಯ ವಿಳಾಸ ಕೊಡು, ಇದನ್ನ ನಿನಗೆ ಕಳುಹಿಸಿ ಕೊಡ್ತೇನೆ ಎಂದು ಹೇಳಿದ್ದಾರೆ.

ಆದರೆ ಹೆಲ್ಲೋಫ್ರೆಶ್​ ಎಂದಿಗೂ ಊಟದ ಆರ್ಡರ್​ ಜೊತೆ ಪಾನೀಯವನ್ನ ನೀಡೋದಿಲ್ಲ. ಹೀಗಾಗಿ ಇದು ಡೆಲಿವರಿ ಬಾಯ್​​ ಟಾಯ್ಲೆಟ್​ ಹೋಗಲು ಆಗದೇ ಈ ಕೃತ್ಯ ಎಸಗಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಒಲಿವರ್​ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಹೆಲ್ಲೋ ಫ್ರೆಶ್​, ಒಲಿವರ್​​ ಬಳಿ ಕ್ಷಮೆಯಾಚಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...