alex Certify ನಗುವ ಎಮೋಜಿ ತಂದಿಟ್ಟ ಸಂಕಷ್ಟ ; 200 ಕಿ.ಮೀ ಪ್ರಯಾಣಿಸಿ ಜಾಮೀನು ಪಡೆದ ಯುವಕ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗುವ ಎಮೋಜಿ ತಂದಿಟ್ಟ ಸಂಕಷ್ಟ ; 200 ಕಿ.ಮೀ ಪ್ರಯಾಣಿಸಿ ಜಾಮೀನು ಪಡೆದ ಯುವಕ !

ಅಸ್ಸಾಂನ ಧೇಕಿಯಾಜುಲಿಯ ವ್ಯಕ್ತಿಯೊಬ್ಬರು ಫೇಸ್‌ಬುಕ್ ಪೋಸ್ಟ್‌ನಲ್ಲಿನ ಕಮೆಂಟ್‌ಗೆ ನಗುವ ಎಮೋಜಿ ಹಾಕಿದ್ದಕ್ಕೆ ಐಎಎಸ್ ಅಧಿಕಾರಿಯೊಬ್ಬರು ದೂರು ದಾಖಲಿಸಿದ ಕಾರಣ 200 ಕಿಲೋಮೀಟರ್ ಪ್ರಯಾಣಿಸಿ ಜಾಮೀನು ಪಡೆಯುವಂತಾಗಿದೆ. ವರ್ಣಾಲಿ ದೇಕಾ ಎಂಬ ಐಎಎಸ್ ಅಧಿಕಾರಿ ಅಮಿತ್ ಚಕ್ರವರ್ತಿ ಮತ್ತು ಇತರ ಇಬ್ಬರ ವಿರುದ್ಧ ಸೈಬರ್ ಸ್ಟಾಕಿಂಗ್ ಮತ್ತು ಲೈಂಗಿಕವಾಗಿ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಏನಿದು ಘಟನೆ ? 2023 ರಲ್ಲಿ, ನರೇಶ್ ಬರುವಾ ಎಂಬವರು ವರ್ಣಾಲಿ ದೇಕಾ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ “ಇಂದು ಮೇಕಪ್ ಇಲ್ಲವಾ ?” ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಅಮಿತ್ ಚಕ್ರವರ್ತಿ ನಗುವ ಎಮೋಜಿ ಹಾಕಿ ಪ್ರತಿಕ್ರಿಯಿಸಿದ್ದರು. ದೇಕಾ ಅವರು ಚಕ್ರವರ್ತಿಗೆ “ನಿಮ್ಮ ಸಮಸ್ಯೆ ಏನು ?” ಎಂದು ಪ್ರಶ್ನಿಸಿದ್ದರು. ಸ್ವಲ್ಪ ಸಮಯದ ನಂತರ, ಅವರು ಮೂರು ಜನರ ವಿರುದ್ಧ ಕೊಕ್ರಾಝಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ದೂರಿನಲ್ಲಿ, ದೇಕಾ ಮತ್ತು ಆರೋಪಿಗಳ ನಡುವಿನ ಫೇಸ್‌ಬುಕ್ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಒಂದು ಪೋಸ್ಟ್‌ನಲ್ಲಿ, ಅವರು ಚೌಧರಿಗೆ “ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354D ಅಡಿಯಲ್ಲಿ ಸೈಬರ್ ಸ್ಟಾಕಿಂಗ್ ಬಗ್ಗೆ ತಿಳಿದುಕೊಳ್ಳಿ. ನೀವು ಅದರಲ್ಲಿ ಅಪರಾಧಿ. ನಾನು ಸೈಬರ್ ಸೆಲ್‌ನಲ್ಲಿ ದೂರು ದಾಖಲಿಸುತ್ತಿದ್ದೇನೆ. ನನ್ನನ್ನು ಹಿಂಬಾಲಿಸುವ ಬದಲು ನಿಮ್ಮ ಕೆಲಸದ ಮೇಲೆ ಗಮನ ಹರಿಸಬೇಕಿತ್ತು” ಎಂದು ಎಚ್ಚರಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ಚಕ್ರವರ್ತಿಯನ್ನು ಟ್ಯಾಗ್ ಮಾಡಿ, “ಇದು ಅವಹೇಳನಕಾರಿ ಮತ್ತು ಬಣ್ಣದ ಮೇಲಿನ ಟೀಕೆ. ಸೆಕ್ಷನ್ 354A ಅನ್ನು ಉಲ್ಲೇಖಿಸಿ. ನಾನು ನಿಮ್ಮ ವಿರುದ್ಧ ದೂರು ದಾಖಲಿಸುತ್ತಿದ್ದೇನೆ” ಎಂದು ಬರೆದಿದ್ದಾರೆ.

ಈ ವರ್ಷದ ಜನವರಿಯಲ್ಲಿ, ಚಕ್ರವರ್ತಿಯನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಅವರು ವಿವರಗಳನ್ನು ಕೇಳಿದಾಗ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾತ್ರ ತಿಳಿಸಲಾಯಿತು. ನಂತರ, ಅವರ ವಕೀಲರೊಬ್ಬರು ಪ್ರಕರಣದ ಬಗ್ಗೆ ತಿಳಿಯಲು ಸಹಾಯ ಮಾಡಿದರು. ಇಂತಹ ಸಣ್ಣ ವಿಷಯಕ್ಕೆ ಐಎಎಸ್ ಅಧಿಕಾರಿ ಇಂತಹ ಕಠಿಣ ಕ್ರಮ ಕೈಗೊಂಡಿರುವುದು ಆಶ್ಚರ್ಯಕರ ಎಂದು ಚಕ್ರವರ್ತಿ ಹೇಳಿದ್ದಾರೆ.

ಚಕ್ರವರ್ತಿ ಎನ್‌ಡಿಟಿವಿಗೆ ನೀಡಿದ ಹೇಳಿಕೆಯಲ್ಲಿ, “ನಾನು ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ ಅಷ್ಟೇ…… ನಗುವ ಎಮೋಜಿ ಹಾಕಿದ್ದಕ್ಕೆ ಇಂದು ನಾನು ಜಾಮೀನು ಪಡೆಯಬೇಕಾಗಿದೆ. ವರ್ಣಾಲಿ ದೇಕಾ ಐಎಎಸ್ ಅಧಿಕಾರಿ ಅಥವಾ ಡೆಪ್ಯುಟಿ ಕಮಿಷನರ್ ಎಂದು ನನಗೆ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ. “ನನ್ನ ಪ್ರತಿಕ್ರಿಯೆಗೆ, ಫೇಸ್‌ಬುಕ್‌ನಲ್ಲಿ ನಗುವ ಎಮೋಜಿ ಹಾಕಿದ್ದಕ್ಕೆ ನನ್ನನ್ನು ಕಿರುಕುಳಪಡಿಸಲಾಗಿದೆ. ನಾನು ನರೇಶ್ ಬರುವಾ ಎಂಬುವವರ ಪೋಸ್ಟ್‌ಗೆ ಮಾತ್ರ ಪ್ರತಿಕ್ರಿಯಿಸಿದೆ. ಪ್ರಕರಣದ ಬಗ್ಗೆ ಬೇರೇನೂ ನೆನಪಿಲ್ಲ” ಎಂದು ಅವರು ತಿಳಿಸಿದ್ದಾರೆ. ಈ ಘಟನೆಯು ಆನ್‌ಲೈನ್ ಸಂವಹನಗಳಿಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...