ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಪಕ್ಕದ ಮನೆ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸಿಹಿ ತಿಂಡಿ ಆಸೆ ತೋರಿಸಿ ಮನೆಗೆ ಕರೆದೊಯ್ದ ಆರೋಪಿ ನಂತ್ರ ಹೇಸಿಗೆ ಕೆಲಸ ಮಾಡಿದ್ದಾನೆ.
ಬುಲಂದರ್ ಶಹರ್ ನಲ್ಲಿ ಆರೋಪಿ,ಮಗುವನ್ನು ನಂಬಿಸಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ತಪ್ಪಿಸಿಕೊಂಡಿದ್ದಾನೆ. ಪಾಲಕರು ಮಗುವನ್ನು ನೋಡಿದಾಗ, ಮಗು ರಕ್ತದ ಮಡುವಿನಲ್ಲಿತ್ತು ಎನ್ನಲಾಗಿದೆ. ತಕ್ಷಣ ಬಾಲಕಿಯನ್ನು,ಪಾಲಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೀಡಿತೆ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗೆ ಬಾಲಕಿ ಸ್ಪಂದಿಸುತ್ತಿದ್ದಾಳೆಂದು ವೈದ್ಯರು ಹೇಳಿದ್ದಾರೆ.
ಆರೋಪಿ, ಪೀಡಿತೆಯ ನೆರೆ ಮನೆಯವನಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರ ಆರೋಪಿ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಬಾಲಕಿ ವೈದ್ಯಕೀಯ ಚಿಕಿತ್ಸೆ ವರದಿ ಬಂದ ನಂತ್ರ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.