ಮೊರಾದಾಬಾದ್ (ಉತ್ತರ ಪ್ರದೇಶ): ಫಿಟ್ ಆಗಿರುವ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ಮೊರಾದಾಬಾದ್ ಎಕ್ಸ್‌ಪ್ರೆಸ್ ಎಂದು ಜನಪ್ರಿಯವಾಗಿರುವ ಝೈನುಲ್ ಅಬೇದಿನ್ ಟ್ರೆಡ್‌ಮಿಲ್‌ನಲ್ಲಿ 12 ಗಂಟೆಗಳ ಕಾಲ ಓಡಿದ್ದಾರೆ.
ಆಶ್ಚರ್ಯ ಅನಿಸಿದ್ರೂ ಇದು ನಿಜ. ಫಿಟ್‌ನೆಸ್ ಉತ್ಸಾಹಿಯಾಗಿರುವ ಝೈನುಲ್, ಟ್ರೆಡ್‌ಮಿಲ್‌ನಲ್ಲಿ 66 ಕಿ.ಮೀ ದೂರ ಓಡುವಷ್ಟು ವ್ಯಾಯಾಮ ಮಾಡಿದ್ದಾರೆ. ಈ ಸಾಧನೆಯೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ಮಾಡುವುದಕ್ಕೆ ಅವರು ಮುಂದಾಗಿದ್ದಾರೆ.
ಝೈನುಲ್ ಅಬೇದಿನ್ ಅನೇಕ ರೇಸ್‌ಗಳಲ್ಲಿ ಭಾಗವಹಿಸಿದ್ದಾರೆ. ಮೊರಾದಾಬಾದ್ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದಾರೆ. 2018 ರಲ್ಲಿ, ಅಬೇಡಿನ್ ದೆಹಲಿಯ ಇಂಡಿಯಾ ಗೇಟ್‌ನಿಂದ ಮಹಿಳೆಯರ ಗೌರವಾರ್ಥಕ್ಕಾಗಿ ಓಟವನ್ನು ಪ್ರಾರಂಭಿಸಿದ್ದರು. ಆಗ್ರಾ, ಜೈಪುರ ಮತ್ತು ದೆಹಲಿಯಲ್ಲಿ ಮ್ಯಾರಥಾನ್ ಮಾಡಿದ್ದು, ಏಳು ದಿನ ಮತ್ತು 22 ಗಂಟೆಗಳಲ್ಲಿ ಈ ಓಟವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ, ಅಬೇದಿನ್ ಪೊಲೀಸರ ಗೌರವಾರ್ಥವಾಗಿ 50 ಕಿ.ಮೀ ಓಡಿದ್ದಾರೆ. ಶನಿವಾರ ಟ್ರೆಡ್‌ಮಿಲ್‌ನಲ್ಲಿದ್ದಾಗ ಜಿಲ್ಲೆಯ ಹಲವು ಅಧಿಕಾರಿಗಳು ಅವರನ್ನು ಭೇಟಿ ಮಾಡಿ ಹುರಿದುಂಬಿಸಿದ್ದಾರೆ. ಈ ಸಾಧನೆಯನ್ನು ಪೂರ್ಣಗೊಳಿಸಿದ ನಂತರ ಶನಿವಾರ ತಡರಾತ್ರಿ, ಅವರ ಬೆಂಬಲಿಗರು ಹೂವನ್ನು ಸುರಿದಿದ್ದಾರೆ.
https://www.youtube.com/watch?v=ABGe23CPdeg