ವ್ಯಕ್ತಿಯೊಬ್ಬನ ಖಾಸಗಿ ಅಂಗವು ಪ್ಲಾಸ್ಟಿಕ್ ಬಾಟಲಿಯೊಳಗೆ ಸಿಲುಕಿದ ಕಾರಣಕ್ಕೆ ಆತ ಆಸ್ಪತ್ರೆಗೆ ದಾಖಲಾದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಟಲಿಯೊಳಗೆ ಸಿಲುಕಿರುವ ಶಿಶ್ನವು ಸಂಪೂರ್ಣ ಕೊಳೆತು ಹೋಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಅಂದಹಾಗೆ ಈ ಪ್ಲಾಸ್ಟಿಕ್ ಬಾಟಲಿಯೊಳಗೆ ವ್ಯಕ್ತಿಯ ಶಿಶ್ನವು ಬರೋಬ್ಬರಿ 2 ತಿಂಗಳುಗಳ ಕಾಲ ಸಿಲುಕಿತ್ತು. ಇದರಿಂದ ಈ ಭಾಗಕ್ಕೆ ರಕ್ತ ಸಂಚಾರ ಕುಂಠಿತವಾಗಿದೆ. ಈ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ. ಈ ವಿಚಾರವನ್ನು ಆತ ಯಾರೊಂದಿಗೂ ಹೇಳಿಕೊಂಡೇ ಇರಲಿಲ್ಲ. ಆದರೆ ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಬೇರೆ ವಿಧಿ ಕಾಣದೇ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.
ಇಂಟರ್ನ್ಯಾಷನಲ್ ಸರ್ಜರಿ ಕೇಸ್ ರಿಪೋರ್ಟ್ ಜರ್ನಲ್ನಲ್ಲಿ ಈ ಪ್ರಕರಣವನ್ನು ಪ್ರಕಟಿಸಲಾಗಿದೆ. ಬಿ.ಪಿ ಕೊಯ್ರಾಲಾ ಸಂಸ್ಥೆಯ ದುರ್ಗಾ ನುಪಾನೆ ಎಂಬವರು ಈ ರಿಪೋರ್ಟ್ನ ಮುಖ್ಯ ಲೇಖಕರಾಗಿದ್ದಾರೆ. ಇದೊಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದೆ. ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಲೈಂಗಿಕ ಪ್ರಚೋದನೆಗಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಲೋಹ ಅಥವಾ ಪ್ಲಾಸ್ಟಿಕ್ ಬಾಟಲಿಗಳಂತಹ ವಸ್ತುವನ್ನು ಬಳಸುತ್ತಾರೆ. ಸೂಕ್ತ ಶಸ್ತ್ರಚಿಕಿತ್ಸಾ ಸೌಕರ್ಯಗಳ ಲಭ್ಯತೆ ಹಾಗೂ ತಜ್ಞ ವೈದ್ಯರಿಂದ ಮಾತ್ರ ಇಂತಕ ಕ್ಲಿಷ್ಟ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಬರೋಬ್ಬರಿ 2 ತಿಂಗಳಿನಿಂದ ಪ್ಲಾಸ್ಟಿಕ್ ಬಾಟಲಿಯ ಒಳಗೆ ಶಿಶ್ನವನ್ನು ಸಿಲುಕಿಸಿಕೊಂಡಿದ್ದ 45 ವರ್ಷದ ಮಾನಸಿಕ ಅಸ್ವಸ್ಥನ ಈ ಪ್ರಕರಣವನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾಗಿದೆ. ಇದರಿಂದ ಆತನ ಶಿಶ್ನ ಊದಿಕೊಂಡಿತ್ತು. ಗುಣಮಟ್ಟದ ವೈದ್ಯಕೀಯ ಉಪಕರಣಗಳೇ ವಿಫಲವಾದ ಕಾರಣ ಕೇಬಲ್ ವೈರ್ ಕಟರ್ನ್ನು ಬಳಸಲಾಯ್ತು. ಅದೇ ದಿನ ರೋಗಿಯನ್ನು ಡಿಸ್ಚಾರ್ಜ್ ಕೂಡ ಮಾಡಲಾಗಿತ್ತು. ಆದರೆ ಈ ಬಗ್ಗೆ ಮತ್ತಷ್ಟು ಫಾಲೋ ಅಪ್ ಮಾಡಬೇಕು ಎಂದಿದ್ದರೂ ಸಹ ಆ ರೋಗಿ ಮತ್ತೆ ನಮಗೆ ಸಿಗಲಿಲ್ಲ ಎಂದು ಹೇಳಿದ್ದಾರೆ.