ಮ್ಯಾರಥಾನ್ ಮುಗಿಸುತ್ತಿದ್ದಂತೆಯೇ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿರುವ ಅಚ್ಚರಿಯ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ. ಈ ಮನಮೋಹಕ ವಿಡಿಯೋವನ್ನು ‘ಗುಡ್ನ್ಯೂಸ್ ಮೂವ್ಮೆಂಟ್’ ಪುಟ ಹಂಚಿಕೊಂಡಿದೆ. ಇದು ಸುಮಾರು 3 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಟನ್ ಗಳಷ್ಟು ಲೈಕ್ಸ್ ಗಳನ್ನು ಪಡೆದುಕೊಂಡಿದೆ.
ನ್ಯೂಯಾರ್ಕ್ನಲ್ಲಿ ನಡೆದ ಬಫಲೋ ಮ್ಯಾರಥಾನ್ನ ಕೊನೆಯಲ್ಲಿ, ಕ್ರಿಸ್ಟೋಫರ್ ಜೇಮ್ಸ್ ಎಂಬಾತ ತನ್ನ ಒಂದು ಮೊಣಕಾಲಿನ ಮೇಲೆ ಕುಳಿತು ಮ್ಯಾಡಿಸನ್ ಮಹರ್ ಅವರಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. ನೆಟ್ಟಿಗರು ಈ ಪ್ರಸ್ತಾಪವನ್ನು ಇಷ್ಟಪಟ್ಟಿದ್ದಾರೆ.
ಮ್ಯಾರಥಾನ್ ನ ಅಂತಿಮ ಗೆರೆಯು ತನ್ನ ಸ್ನೇಹಿತನೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಪ್ರಾರಂಭದ ಗೆರೆಯಾಯಿತು. ತಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ಕ್ರಿಸ್ಟೋಫರ್ ಜೇಮ್ಸ್, ಎಂದು ಮ್ಯಾಡಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, ಕ್ರಿಸ್ ತನ್ನನ್ನು ಹೇಗೆ ಬೆಂಬಲಿಸುತ್ತಾನೆ ಎಂಬುದರ ಕುರಿತು ಕೂಡ ಆಕೆ ಹಂಚಿಕೊಂಡಿದ್ದಾಳೆ. ತನ್ನ ಸಾಧನೆ ಹಿಂದೆ ಕ್ರಿಸ್ ಬೆನ್ನೆಲುಬಾಗಿ ನಿಂತಿದ್ದಾನೆ ಎಂದು ಮ್ಯಾಡಿ ವಿವರಿಸಿದ್ದಾಳೆ. ತಾನು ಬಹಳ ಅದೃಷ್ಟಶಾಲಿಯಾಗಿದ್ದೇನೆ ಎಂದು ಹೇಳಿದ್ದಾಳೆ.
ನೆಟ್ಟಿಗರು ಕೂಡ ಈ ಸುಂದರ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಪ್ರೀತಿ ಮತ್ತು ಹೃದಯದ ಎಮೋಜಿಗಳನ್ನು ಹರಿಯಬಿಟ್ಟಿದ್ದಾರೆ.
https://youtu.be/ZQggo4lr93I