
ಅಮೆರಿಕದ ಗಾಯಕಿ ಹಾಗೂ ಗೀತ ರಚನಾಕಾರ್ತಿ ಟೇಲರ್ ಸ್ವಿಫ್ಟ್ ತಮ್ಮ ಬಹುನಿರೀಕ್ಷಿತ ಎರಾಸ್ ಟೂರ್ ಅನ್ನು ಅರಿಜ಼ೋನಾದಲ್ಲಿ ಆರಂಭಿಸಿದ್ದಾರೆ. ಟೇಲರ್ರ ಈ ಗೀತಗೋಷ್ಠಿಯಲ್ಲಿ ಅವರಿಗಿಂತಲೂ ಹೆಚ್ಚು ಮಿಂಚಿದ್ದೆಂದರೆ ಮನದನ್ನೆಗೆ ಪ್ರೇಮ ನಿವೇದನೆ ಮಾಡಲೆಂದೇ ಈ ಕ್ಷಣಕ್ಕಾಗಿ ಕಾಯುತ್ತಿದ್ದ ಪ್ರೇಮಿ.
ಟೇಲರ್ ತಮ್ಮ ಅಚ್ಚುಮೆಚ್ಚಿನ ’ಲವ್ ಸ್ಟೋರಿ’ ಗೀತೆಯನ್ನು ಹಾಡಲು ಮುಂದಾಗುತ್ತಲೇ ಈತ ತನ್ನ ಮನದನ್ನೆಗೆ ಪ್ರಪೋಸ್ ಮಾಡಿದ್ದಾನೆ. ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಲು ಈತ ಆಯ್ದುಕೊಂಡ ಸಮಯದ ಟೈಮಿಂಗ್ ಸಕತ್ತಾಗಿದೆ ಎಂದು ಅನೇಕರು ಪ್ರಶಂಶಿಸಿದರೆ ಇನ್ನೂ ಕೆಲವರು ಇದೆಲ್ಲಾ ಪೂರ್ವನಿರ್ಧರಿತ ಎಂದಿದ್ದಾರೆ. ಒಟ್ಟಿನಲ್ಲಿ ಈ ಘಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
’ಹೀ ನೆಲ್ಟ್ ಟು ದಿ ಗ್ರೌಂಡ್ ಅಂಡ್ ಪುಲ್ಡ್ ಔಟ್ ಎ ರಿಂಗ್, ಮ್ಯಾರಿ ಮೀ, ಜೂಲಿಯೆಟ್’ ಎಂಬ ಸಾಲುಗಳನ್ನು ಟೇಲರ್ ಗುನುಗಲು ಆರಂಭಿಸುತ್ತಲೇ ಈ ಪ್ರೇಮಿ ತನ್ನ ಪ್ರೇಯಸಿಯೆದುರು ಮಂಡಿಯೂರಿ ಕುಳಿತು, ಉಂಗುರವಿದ್ದ ಬಾಕ್ಸ್ ತೆರೆದು ಆಕೆಗೆ ಮನದಾಳದ ಮಾತುಗಳನ್ನು ನಿವೇದಿಸಿಕೊಳ್ಳುತ್ತಾನೆ. ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ಈ ಕ್ಷಣವು ತನ್ನ ಪ್ರಿಯಕರನ ಪ್ರೇಮ ನಿವೇದನಗೆ ’ಯೆಸ್’ ಎಂದು ಪ್ರೇಯಸಿ ಹೇಳುವುದರೊಂದಿಗೆ ಸುಖಾಂತ್ಯ ಕಾಣುತ್ತದೆ.
’ದಿ ಸ್ವಿಫ್ಟ್ ಸೊಸೈಟಿ’ ಟ್ವೀಟ್ ಮಾಡಿರುವ ಈ ವಿಡಿಯೋಗೆ ಅದಾಗಲೇ 514,000 ವೀಕ್ಷಣೆಗಳು ಸಿಕ್ಕಿವೆ.
https://twitter.com/taygoatmtt/status/1637184107128954880?ref_src=twsrc%5Etfw%7Ctwcamp%5Etweetembed%7Ctwterm%5E1637184107128954880%7Ctwgr%5E1940693298b9aa6eedfe7f86384b1e89b5b9206d%7Ctwcon%5Es1_&ref_url=https%3A%2F%2Fwww.news18.com%2Fbuzz%2Fman-proposes-to-girlfriend-as-taylor-swift-sings-love-story-live-7345675.html