
ತಮ್ಮ ಕನಸಿನ ಹೆಂಗಸಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಗಂಡಸರು ಒಂದಿಲ್ಲೊಂದು ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಲೈವ್ ಮ್ಯಾಚ್ ನಡೆಯುತ್ತಿರುವ ಕ್ರೀಡಾಂಗಣದಲ್ಲಿ, ರೆಸ್ಟೋರೆಂಟ್‌ಗಳಲ್ಲಿ, ಪ್ರಶಾಂತವಾದ ಪ್ರದೇಶಗಳಲ್ಲಿ ಮಂಡಿಯೂರಿ, ಆಕೆಗೆ ಉಂಗುರ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳುವುದೆಲ್ಲಾ ಚಾಲ್ತಿಯಲ್ಲಿರುವ ಐಡಿಯಾಗಳು.
ಹಾಲಿವುಡ್ ಚಿತ್ರದ ದೃಶ್ಯ ನೆನಪಿಸುವ ರೀತಿಯಲ್ಲಿ ಇಲ್ಲೊಬ್ಬ ತನ್ನ ಮನದನ್ನೆಗೆ ವಿಮಾನ ನಿಲ್ದಾಣದಲ್ಲಿ ಪ್ರಪೋಸ್ ಮಾಡಿದ್ದಾನೆ. ಗಗನ ಸಖಿಯಾದ ತನ್ನ ಗೆಳತಿಗೆ ಮನದಾಳದ ಪ್ರೇಮ ನಿವೇದನೆ ಮಾಡಿಕೊಳ್ಳಲು ಈತ ಡಬ್ಲಿನ್ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದಾನೆ.
ಫ್ಲೈಟ್ ಒಂದರಲ್ಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿ ಬರುತ್ತಿದ್ದ ಈ ಗಗನಸಖಿಗೆ ಆಕೆಯ ಗೆಳೆಯ ಆ ವೇಳೆಯೇ ಪ್ರಪೋಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಸಂದಾಯವಾಗಿವೆ.
ಈತನ ಪ್ರಪೋಸಲ್‌ಗೆ ಆಕೆ ಯೆಸ್ ಎಂದಿದ್ದು ಪ್ರಕರಣಕ್ಕೆ ಸಿಹಿಯಾದ ಅಂತ್ಯ ಸಿಕ್ಕಿದೆ.