ನೀವು ಹಲವಾರು ಪ್ರೇಮ ಪ್ರಸ್ತಾಪಗಳನ್ನು ನೋಡಿರಬಹುದು. ಆದರೆ, ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಪ್ರಪೋಸ್ ಮಾಡಿರೋದನ್ನು ಎಂದಾದ್ರೂ ನೋಡಿದ್ದೀರಾ..? ಹೌದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಯುವತಿಗೆ ವಿಮಾನದಲ್ಲಿ ಪ್ರೇಮ ನಿವೇದನೆ ಮಾಡಿದ್ದಾನೆ.
ಮನು ರಾಜ್ ಎಂಬ ವ್ಯಕ್ತಿ ತನ್ನ ಗೆಳತಿಗೆ ವಿಮಾನದಲ್ಲಿ ಪ್ರಪೋಸ್ ಮಾಡಿದ್ದಾನೆ. ಈತ ತನ್ನ ಗೆಳತಿಗೆ ಪ್ರಪೋಸ್ ಮಾಡಲು ಬೇರೆ ರೀತಿ ಯೋಜಿಸಿದ್ದಾನೆ. ವಿಶಿಷ್ಟವಾಗಿ ಪ್ರೇಮ ನಿವೇದನೆ ಮಾಡಲು ಆತ ಕ್ಯಾಬಿನ್ ಸಿಬ್ಬಂದಿಯ ಸಹಾಯ ಪಡೆದಿದ್ದಾನೆ. ಈ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಮನು ರಾಜ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ, ಕ್ಯಾಬಿನ್ ಸಿಬ್ಬಂದಿ ಯುವತಿಯನ್ನು ಆಕೆಯ ಹ್ಯಾಂಡ್ ಬ್ಯಾಗ್ ಚೆಕ್ ಮಾಡಬೇಕು ಎಂದು ಕೇಳಿಕೊಂಡರು. ಇದರಿಂದ ಆತಂಕದಲ್ಲೇ ಎದ್ದು ಹೋದ ಯುವತಿ ತನ್ನ ಬ್ಯಾಗ್ ಅನ್ನು ಪರೀಕ್ಷಿಸಲು ನೀಡಿದ್ದಾಳೆ. ಈ ವೇಳೆ ವಿಮಾನದ ಸಿಬ್ಬಂದಿ ಆಕೆಯನ್ನು ತನ್ನ ಎಡಕ್ಕೆ ನೋಡುವಂತೆ ಹೇಳಿದ್ದಾರೆ. ಈ ವೇಳೆ ಅಲ್ಲಿ ಮನು ಪುಷ್ಪಗುಚ್ಛದೊಂದಿಗೆ ನಿಂತಿದ್ದನು. ಶೀಘ್ರದಲ್ಲೇ ಮನು ತನ್ನ ಒಂದು ಮೊಣಕಾಲಿನ ಮೇಲೆ ನಿಂತು ಆಕೆಗೆ ಪ್ರಪೋಸ್ ಮಾಡಿದ್ದಾನೆ.
ಸಮುದ್ರ ಮಟ್ಟದಿಂದ 30,000 ಅಡಿ ಎತ್ತರದಲ್ಲಿ ಅವಳನ್ನು ಆಶ್ಚರ್ಯಗೊಳಿಸಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಆನ್ಲೈನ್ನಲ್ಲಿ ಹಂಚಿಕೊಂಡ ನಂತರ, ವಿಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು. ವಿಡಿಯೋ ನೋಡಿದ ನೆಟ್ಟಿಗರು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ.
ಮನು ರಾಜ್ ಅವರು ಶೀರ್ಷಿಕೆಯಲ್ಲಿ ಪ್ರೇಮ ಪ್ರಸ್ತಾಪವನ್ನು ಹೇಗೆ ಸಾಧಿಸಲು ಸಾಧ್ಯವಾಯಿತು ಎಂಬುದನ್ನು ವಿವರಿಸಿದ್ದಾರೆ. ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಕೆಗಾಗಿ ಕಾಯುವ ಬದಲು ವಿಮಾನದಲ್ಲಿ ಯುವತಿಯನ್ನು ಅಚ್ಚರಿಗೊಳಿಸಲು ತೀರ್ಮಾನಿಸಿದ್ದರು. ಇದಕ್ಕಾಗಿ ಅವರು ಕ್ಯಾಬಿನ್ ಸಿಬ್ಬಂದಿಯ ಸಹಾಯ ಪಡೆದ್ರು.