ಪುಟಾಣಿ ಮಕ್ಕಳಿಗೆ ಅಪ್ಪ-ಅಮ್ಮಂದಿರೇ ಮೊದಲ ಪ್ರೀತಿ ಎಂದರೆ ಒಬ್ಬ ತಂದೆ ಅವರ ಮೊದಲ ನಾಯಕ ಎನ್ನುವ ಮಾತಿದೆ.
ಕೆಲವರು ತಮ್ಮ ಅಪ್ಪಂದಿರು ಹೀರೋಗಳಿಗಿಂತ ಹೆಚ್ಚು ಎಂದು ಕಾಣುತ್ತಾರೆ. ಅವರನ್ನು ಸೂಪರ್ ಹೀರೋಗಳು ಎಂದು ಉದ್ಗರಿಸುತ್ತಾರೆ. ತಮ್ಮ ಅಪ್ಪಂದಿರ ಒಡನಾಟವನ್ನು ಸರಳವಾಗಿ ಪ್ರೀತಿಸುವ ಮಕ್ಕಳು ಮತ್ತು ಅವರ ತಂದೆ ಅವರೊಂದಿಗೆ ಆಟವಾಡುತ್ತಾ ಮಕ್ಕಳಾಗುವ ಹಲವಾರು ವೀಡಿಯೊಗಳಿವೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವೀಡಿಯೊವು ತಂದೆ ಮತ್ತು ಅವರ ಮಗನ ನಡುವಿನ ವಿಶೇಷ ಬಾಂಧವ್ಯವನ್ನು ತೋರಿಸುತ್ತದೆ.
ಅಪ್ಪನೊಬ್ಬ ಅವನ ಪುಟ್ಟ ಮಗನನ್ನು ಆಟಿಕೆ ಕುದುರೆಯ ಮೇಲೆ ಕುಳ್ಳರಿಸಿ ನಿಜವಾದ ಕುದುರೆಯಂತೆ ಸವಾರಿ ಮಾಡುವುದು ಹೇಗೆ ಎನ್ನುವುದನ್ನು ತೋರಿಸುತ್ತಿರುವ ವಿಡಿಯೋ ಇದಾಗಿದ್ದು, ನೆಟ್ಟಿಗರು ಸೋ ಕ್ಯೂಟ್ ಎನ್ನುತ್ತಿದ್ದಾರೆ.