ಈ ಬಾರಿ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಕಡೆ ಕಂಡರಿಯದಂತಹ ತಾಪಮಾನ ಇದೆ. ಬಿಸಿ ಗಾಳಿಯೂ ಸಹ ಹಲವು ಭಾಗಗಳಲ್ಲಿ ಬೀಸುತ್ತಿದ್ದು, ಇದರ ಪರಿಣಾಮ ಕೆಲವರು ಸಾವಿಗೀಡಾಗಿದ್ದಾರೆ. ಆರೋಗ್ಯ ಸಲಹೆಗಾರರು ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಆದಷ್ಟು ಹೊರ ಹೋಗುವುದನ್ನು ತಪ್ಪಿಸಿ ಎಂದು ಸಲಹೆ ನೀಡುತ್ತಿದ್ದಾರೆ.
ಇದರ ಜೊತೆಗೆ ಸೆಕೆಯ ಕಾರಣಕ್ಕೆ ಮಲಗುವುದು ಸಹ ಕಷ್ಟಕರವಾಗಿದ್ದು, ಫ್ಯಾನ್ ಹಾಕಿದರೂ ಸಹ ಬಿಸಿ ಗಾಳಿ ಬೀಸುತ್ತಿದೆ. ಹೀಗಾಗಿ ಕೆಲವರು ಏರ್ ಕಂಡಿಷನರ್ ಉಪಯೋಗಿಸುತ್ತಿದ್ದಾರೆ. ಇದಕ್ಕೆ ಅನುಕೂಲವಿಲ್ಲದವರು ಏರ್ ಕೂಲರ್ ಬಳಸುತ್ತಿದ್ದು, ಆದರೆ ಕಾಲಕಾಲಕ್ಕೆ ನೀರು, ಐಸ್ ಕ್ಯೂಬ್ ಹಾಕುವುದು ದೊಡ್ಡ ಸಮಸ್ಯೆ.
ಇದಕ್ಕೆ ವ್ಯಕ್ತಿಯೊಬ್ಬರು ಪರಿಹಾರ ಕಂಡುಕೊಂಡಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವ್ಯಕ್ತಿ ತೆರೆದ ಬಾಗಿಲಿನ ಫ್ರಿಡ್ಜ್ ಮುಂದೆ ಕೂಲರ್ ಇಟ್ಟಿದ್ದು, ಆ ಮೂಲಕ ಐಸ್ ಕ್ಯೂಬ್ ಬಳಸುವುದನ್ನು ತಾತ್ಕಾಲಿಕವಾಗಿ ಅವಾಯ್ಡ್ ಮಾಡಿದ್ದಾರೆ. ಅಲ್ಲದೆ ಕೂಲರ್ ಮುಂದೆ ಸುಖವಾದ ನಿದ್ರೆ ಮಾಡುತ್ತಿದ್ದಾರೆ.
ಆದರೆ ಈ ವಿಡಿಯೋಗೆ ನೆಟ್ಟಿಗ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಐಡಿಯಾ ಸೂಪರ್ ಎಂದು ಹೇಳಿದ್ದರೆ ಮತ್ತೆ ಹಲವರು ನಿಮ್ಮ ಕರೆಂಟ್ ಬಿಲ್ ಭಾರಿ ಏರಿಕೆಯಾಗಲಿದೆ. ಹಾಗಾಗಿ ಫ್ರಿಜ್ ಬಾಗಿಲು ತೆರೆದು ಈ ರೀತಿ ಮಾಡುವುದನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ. ಈ ವಿಡಿಯೋಗೆ ನಿಮ್ಮ ಪ್ರತಿಕ್ರಿಯೆಯನ್ನೂ ನೀಡಿ.