ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಮೆಟರ್ನಿಟಿ ಫೋಟೋಶೂಟ್ ಗಳು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇಲ್ಲೊಂದೆಡೆ ಮಾಡಿರುವ ಮೆಟರ್ನಿಟಿ ಫೋಟೋಶೂಟ್ ವೈರಲ್ ಆಗಿದೆ. ಅದರ ಹಿಂದಿನ ಕಾರಣ ಕೇಳಿದರೆ ಕಣ್ಣಲ್ಲಿ ನೀರು ತರಿಸುತ್ತದೆ.
ಜೇಮ್ಸ್ ಅಲ್ವಾರೆಜ್ ಹಾಗೂ ಒಂದು ವರ್ಷದ ಮಗಳು ಅಡಲಿನ್ ಜೊತೆ ತನ್ನ ದಿವಂಗತ ಹೆಂಡತಿಯೊಂದಿಗಿನ ಫೋಟೋಶೂಟ್ ಅನ್ನು ಮರುಸೃಷ್ಟಿಸಿದ್ದಾರೆ. ಜೇಮ್ಸ್ ಪತ್ನಿ ಯೆಸೇನಿಯಾ ಅಗಿಲಾರ್ ಅವರು ವಾಕ್ ಮಾಡಲು ಹೊರಟಿದ್ದಾಗ ಕಾರು ಡಿಕ್ಕಿ ಹೊಡೆದು ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಆಕೆ 35 ವಾರಗಳ ಗರ್ಭಿಣಿಯಾಗಿದ್ದಳು. ವೈದ್ಯರು ಮಗುವನ್ನು ಉಳಿಸಲು ತುರ್ತಾಗಿ ಸಿಸೇರಿಯನ್ ಮಾಡಬೇಕಾಯಿತು. ಮಗು ಆರೋಗ್ಯವಾಗಿದ್ದು, ತಾಯಿ ಮೃತಪಟ್ಟರು.
ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದ ಕಾವೇರಿ ನಿರ್ವಹಣಾ ಪ್ರಾಧಿಕಾರ
ಜೇಮ್ಸ್ ತನ್ನ ದಿವಂಗತ ಪತ್ನಿಯ ನೆನಪಿಗಾಗಿ ಆಕೆಯೊಂದಿಗಿನ ಮೆಟರ್ನಿಟಿ ಫೋಟೋಶೂಟ್ ಅನ್ನು ಮರುಸೃಷ್ಟಿಸಿದರು. ಮಗಳ ಮೊದಲ ಹುಟ್ಟುಹಬ್ಬದಂದು ಫೋಟೋಶೂಟ್ ಮಾಡಿದರು. ತಾಯಿ ಧರಿಸಿದಂತೆಯೇ ಮುದ್ದಾದ ಗುಲಾಬಿ ಬಣ್ಣದ ಉಡುಗೆಯನ್ನು ಮಗು ಧರಿಸಿದೆ.
https://www.instagram.com/p/CScSL6MFFhU/?utm_source=ig_web_copy_link
https://www.instagram.com/p/CSfIRSNBRts/?utm_source=ig_web_copy_link