alex Certify ಆನ್ಲೈನ್‍ನಲ್ಲಿ ಮಿಲ್ಕ್ ಶೇಕ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ಮೂತ್ರ ತುಂಬಿದ ಕಪ್…..! ಆಮೇಲೆನಾಯ್ತು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್‍ನಲ್ಲಿ ಮಿಲ್ಕ್ ಶೇಕ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ಮೂತ್ರ ತುಂಬಿದ ಕಪ್…..! ಆಮೇಲೆನಾಯ್ತು ಗೊತ್ತಾ….?

ಬಟ್ಟೆ, ಗೃಹಪಯೋಗಿ ವಸ್ತುಗಳು, ಆಹಾರ ಮುಂತಾದವು ಮನೆಬಾಗಿಲಿಗೆ ಬರುತ್ತವೆ. ಮೊಬೈಲ್ ಮೂಲಕ ಆಯಾಯ ಆಪ್ ನಲ್ಲಿ ಬುಕ್ ಮಾಡಿದ್ರೆ ಸಾಕು, ನಿಮ್ಮ ಮನೆ ಬಾಗಿಲಿಗೆ ನಿಮಗೆ ಬೇಕಾಗಿರುವುದು ತಲುಪುತ್ತವೆ. ಆದರೆ, ಕೆಲವೊಮ್ಮೆ ಈ ಆನ್ಲೈನ್ ಡೆಲಿವರಿಯಲ್ಲಿ ಏನಾದ್ರೂ ಲೋಪವಾಗಬಹುದು.

ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಸಸ್ಯಹಾರಿ ಮನೆತನಕ್ಕೆ ಮಾಂಸಹಾರಿ ಭಕ್ಷ್ಯ ರವಾನಿಸಿ ಪ್ರಸಿದ್ಧ ಆಹಾರ ವಿತರಕ ಕಂಪನಿ ಮೇಲೆ ದೂರು ಕೇಳಿಬಂದಿತ್ತು. ಇದೀಗ ಇಂಥದ್ದೇ ಬೇರೆ ರೀತಿಯ ಘಟನೆ ನಡೆದಿದೆ. ಈ ವ್ಯಕ್ತಿಯ ಕಥೆ ಕೇಳಿದ್ರೆ, ಶತ್ರುವಿಗೂ ಈ ಥರ ಬರಬಾರದು ಎಂದೆನಿಸುತ್ತದೆ. ಏನದು ಸ್ಟೋರಿ ಮುಂದೆ ಓದಿ..

ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಆನ್‌ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್‌ನಿಂದ ಗ್ರಾಹಕರೊಬ್ಬರು ಮಿಲ್ಕ್‌ಶೇಕ್ ಅನ್ನು ಆರ್ಡರ್ ಮಾಡಿದ್ದಾರೆ. ಅವರು ತಮ್ಮ ಪಾನೀಯಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಆದರೆ, ಇದಕ್ಕೆ ಪ್ರತಿಯಾಗಿ ಅವರಿಗೆ ಸಿಕ್ಕಿದ್ದು ಮೂತ್ರದಿಂದ ತುಂಬಿದ ಮಿಲ್ಕ್ ಶೇಕ್. ಕ್ಯಾಲೆಬ್ ವುಡ್‌ ಎಂಬುವವರು Grubhub ಅಪ್ಲಿಕೇಶನ್ ಅನ್ನು ಬಳಸಿಕೊಂಡು ಚಿಕ್-ಫಿಲ್-A ನಿಂದ ಫ್ರೈಸ್ ಮತ್ತು ಮಿಲ್ಕ್‌ಶೇಕ್‌ ಆರ್ಡರ್ ಮಾಡಿದ್ದಾರೆ.

ತಮ್ಮ ಆರ್ಡರ್ ಬಂದ ಕೂಡಲೇ ಸ್ವೀಕರಿಸಿದ ಅವರು, ತೆರೆದು ನೋಡಿದಾಗ ಅರೆಕ್ಷಣ ಶಾಕ್ ಆಗಿದ್ದಾರೆ. ಮೊದಲು ಊಟ ಸೇವಿಸಿದ ಅವರು ನಂತರ ಮಿಲ್ಕ್ ಶೇಕ್ ಸಿಪ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ರುಚಿಯಲ್ಲಿ ಏನೋ ವ್ಯತ್ಯಾಸವಿದ್ದಂತೆ ತೋರಿದೆ. ಅದು ಮೂತ್ರದ ವಾಸನೆ ಬಂದಿದೆ. ವಿತರಕಾ ಚಾಲಕನು ತಪ್ಪಾಗಿ ಇನ್ನೊಂದು ಕಪ್ ನೀಡಿರುವುದರಿಂದ ಈ ಘಟನೆ ಸಂಭವಿಸಿದೆ.

ಇನ್ನು ಈ ಬಗ್ಗೆ ಚಿಕಾಗೋ ಮೂಲದ ಕಂಪನಿಯು ತಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆ ಯಾಚಿಸಿದೆ. ಸಂಸ್ಥೆಯೊಂದಿಗಿನ ಒಪ್ಪಂದವನ್ನು ಕೊನೆಗೊಳಿಸುವ ಮೂಲಕ ಚಾಲಕನ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ಗ್ರೂಬ್ ಹೇಳಿಕೊಂಡಿದೆ.

— ABC4 News (@abc4utah) October 28, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...