ನಿತ್ಯ ಬದುಕಿನಲ್ಲಿ ಲವಲವಿಕೆ, ಚೈತನ್ಯ ತುಂಬುವ ಶಕ್ತಿ ಇರುವುದು ಒಂದು ಕಪ್ ಕಾಫಿ ಅಥವಾ ಟೀಗೆ. ಬಹುತೇಕರ ನಿತ್ಯ ಬದುಕು ಶುರುವಾಗುವುದು ಕೂಡ ಒಂದು ಕಪ್ ಕಾಫಿ ಅಥವಾ ಟೀಯೊಂದಿಗೆ ಎಂಬುದು ನಿರ್ವಿವಾದಾತ್ಮಕ ಅಂಶ.
ಅಂತಹ ಕಾಫಿಯಲ್ಲಿ ಒಂಚೂರು ರುಚಿ ವ್ಯತ್ಯಾಸ ಆದರೆ…?! ಕಾಫಿ ಪ್ರೇಮಿಗಳಿಗೆ ಅದು ಕೂಡಲೇ ಗೊತ್ತಾಗಿ ಬಿಡುತ್ತದೆ. ಅಂಥದ್ದೇ ಒಂದು ಅನುಭವ ದೆಹಲಿಯ ಜೊಮ್ಯಾಟೋ ಗ್ರಾಹಕ ಸುಮಿತ್ ಸೌರಭ್‌ಗೆ ಆಗಿದೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಥರ್ಡ್ ವೇವ್ ಇಂಡಿಯಾ ಸಾಮಾನ್ಯವಾಗಿ ಕಾಫಿ ಕುಡಿಯುವ ಸ್ಥಳ. ಜೂನ್ 3ರಂದು ಜೊಮ್ಯಾಟೋ ಮೂಲಕ ದೆಹಲಿಯ ಥರ್ಡ್ ವೇವ್ ಇಂಡಿಯಾದಿಂದ ಒಂದು ಕಪ್ ಕಾಫಿಗೆ ಆರ್ಡರ್ ಮಾಡಿದೆ.
BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ
ಜೊಮ್ಯಾಟೋದವರು ಕಾಫಿ ತಂದುಕೊಟ್ಟು ಹೋದರು. ವೆಜಿಟೇರಿಯನ್ ಪತ್ನಿ ಕಾಫಿ ಕುಡಿದಾಗ ರುಚಿ ಯಾಕೋ ಕೆಟ್ಟಿದೆ ಎಂದು ಗಮನಿಸಿದಾಗ ಕಾಫಿ ಕಪ್‌ನಲ್ಲಿ ಒಂದು ತುಂಡು ಚಿಕನ್ ಪೀಸ್ ಇರುವುದು ಕಂಡುಬಂದಿದೆ!”
ಅದನ್ನು ಅದೇ ಕಾಫಿ ಕಪ್‌ನ ಮುಚ್ಚಳದ ಮೇಲೆ ಇಟ್ಟು ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ ಸುಮಿತ್ ಸೌರಭ್. @zomato, @thirdwaveindia ನಿಂದ ಕಾಫಿ ಆರ್ಡರ್ ಮಾಡಿದೆ. ಇದು ಯಾಕೋ ಅತಿಯಾಯಿತು. ಕಾಫಿ ಕಪ್‌ನಲ್ಲಿ ಚಿಕನ್ ಪೀಸ್!. ನಿಮ್ಮೊಂದಿಗಿನ ನನ್ನ ವಹಿವಾಟು ಇಂದು ಅಧಿಕೃತವಾಗಿ ಕೊನೆಗೊಂಡಿದೆ” ಎಂಬ ಶೀರ್ಷಿಕೆಯನ್ನೂ ಬರೆದರು.
ಈ ಟ್ವೀಟ್ ಬಳಿಕ ಸುಮಿತ್ ಜೊಮ್ಯಾಟೋ ಜತೆಗಿನ ಸಂವಹನದ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಿದ್ದು, ಫುಡ್ ಡೆಲಿವರಿ ಅಪ್ಲಿಕೇಶನ್ ತನ್ನ ತಪ್ಪಿಗೆ ಪರಿಹಾರವಾಗಿ ಪ್ರೋ-ಮೆಂಬರ್‌ಶಿಪ್ ನೀಡುವುದಾಗಿ ಹೇಳಿದೆ ಎಂಬ ಅಂಶದತ್ತ ಗಮನಸೆಳೆದಿದ್ದಾರೆ.
ಸುಮಿತ್ ಟ್ವೀಟ್‌ಗೆ ಥರ್ಡ್ ವೇವ್ ಇಂಡಿಯಾ ಕೂಡ ಪ್ರತಿಕ್ರಿಯಿಸಿದ್ದು, “ಹಾಯ್ ಸುಮಿತ್, ಈ ವಿಚಾರವಾಗಿ ಅತ್ಯಂತ ವಿಷಾದ ವ್ಯಕ್ತಪಡಿಸುತ್ತೇವೆ. DM ಮೂಲಕ ನಿಮ್ಮ ಸಂಪರ್ಕ ವಿವರಗಳನ್ನು ಶೇರ್ ಮಾಡಿ ಎಂದು ವಿನಂತಿ ಮಾಡುತ್ತೇವೆ. ನಮ್ಮ ತಂಡವು ಶೀಘ್ರವೇ ನಿಮ್ಮನ್ನು ಸಂಪರ್ಕಿಸಲಿದೆ, ಧನ್ಯವಾದಗಳು” ಎಂದಿದೆ.
ಈ ಟ್ವೀಟ್ ಸರಣಿ ಬಹುಬೇಗ ಜನರ ಗಮನ ಸೆಳೆದಿದ್ದು, ಜನರಿಂದ ಆಕ್ರೋಶಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
“ನನಗೆ ನಿಜವಾಗಿಯೂ ಕುತೂಹಲವಿದೆ, ಇದನ್ನು ಉದ್ದೇಶಪೂರ್ವಕವಾಗಿ ಮಾಡದ ಹೊರತು, ಬೇರೆಯೇ ಕೌಂಟರ್/ಯಂತ್ರದಲ್ಲಿ ತಯಾರಿಸುವ ಕಾಫಿಯಲ್ಲಿ ಚಿಕನ್ ಪೀಸ್ ಬರುವುದಾದರೂ ಹೇಗೆ? ”ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬ ಬಳಕೆದಾರ, “ನನಗೂ ಇಂಥದ್ದೇ ಅನುಭವ ಆಗಬಹುದು. ನಾನು ಕೂಡ ಸಸ್ಯಾಹಾರಿ. ಇಂತಹ ಅನುಭವ ನನಗಾಗಿದ್ದರೆ ಆ ಶಾಪ್‌ನಿಂದ ಮತ್ತೆ ಆರ್ಡರ್ ಮಾಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.