ಇ ಕಾಮರ್ಸ್ ವೆಬ್ಸೈಟ್ಗಳು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ದೊಡ್ಡ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಕೆಲವೊಮ್ಮೆ ಈ ಆಫರ್ಗಳನ್ನು ನಂಬಿಕೊಂಡು ಜನ ಮೋಸ ಹೋಗೋದು ಸಹ ಇದೆ. ಇದೇ ರೀತಿ ಅಮೆಜಾನ್ನಲ್ಲಿ 90 ಸಾವಿರ ರೂಪಾಯಿ ಪಾವತಿಸಿ ಪೋಟೋಗ್ರಫಿ ಲೆನ್ಸ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೂ ಇದೇ ರೀತಿ ನಿರಾಶೆ ಉಂಟಾಗಿದೆ.
ಅರುಣ್ ಕುಮಾರ್ ಮೆಹ್ರಾ ಎಂದು ಗುರುತಿಸಲಾದ ವ್ಯಕ್ತಿಯು ಸಿಗ್ಮಾ 24-70 ಎಫ್ 2.8 ಲೆನ್ಸ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬೇಳೆ ಕಾಳು ಸಿಕ್ಕಿದೆ. ಇದರಿಂದ ಕೋಪಗೊಂಡ ಮೆಹೆರ್ ಅಮೆಜಾನ್ನ ಈ ಕೃತ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ಯಾಮರಾ ಲೆನ್ಸ್ ಬದಲಾಗಿ ತಾವು ಸ್ವೀಕರಿಸಿದ ವಸ್ತುವಿನ ಫೋಟೋವನ್ನು ಮೆಹರ್ ಶೇರ್ ಮಾಡಿದ್ದಾರೆ. ನಾನು ಪ್ಯಾಕೇಜ್ ತೆರೆಯಬೇಕು ಎಂದು ಹೊರಟಾಗಲೇ ಅಲ್ಲಿ ಮೊದಲೇ ಸೀಲ್ ಒಡೆಯಲಾಗಿದೆ ಎಂದು ನನಗೆ ತಿಳಿಯಿತು. ತೆರೆದು ನೋಡಿದರೆ ಅದರಲ್ಲಿ ಲೆನ್ಸ್ ಇರಲಿಲ್ಲ ಬದಲಾಗಿ ಬೇಳೆ ಕಾಳುಗಳು ಇದ್ದವು ಎಂದು ಹೇಳಿದ್ದಾರೆ.
ಅಮೆಜಾನ್ ಇಂಡಿಯಾ ಈ ಕಮೆಂಟ್ಗೆ ಉತ್ತರ ನೀಡಿದ್ದು. ನಿಮಗೆ ಬೇಸರವಾಗಿದೆ ಎಂಬುದು ನಮಗೆ ಅರ್ಥವಾಗುತ್ತದೆ. ದಯವಿಟ್ಟು ನೀವು ಮೆಸೇಜ್ ಮೂಲಕ ನಮ್ಮನ್ನು ಸಂಪರ್ಕಿಸಿ. ನಿಮಗೆ ಸಹಾಯ ಮಾಡಲು ನಾವು ಎಂದಿಗೂ ಸಿದ್ಧರಿದ್ದೇವೆ ಎಂದು ಬರೆದಿದ್ದಾರೆ.