ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದ ಜನರಿಗೆ, ಕೆಲವು ದಿನಗಳಿಂದ ಸುರಿದ ಮಳೆ ಕೊಂಚ ತಂಪಾಗಿಸಿದ್ದು ನಿಜ. ಆದರೆ ಅದಕ್ಕೂ ಮುಂಚೆ ಸುಡು ಸುಡೋ ಸೂಯ೯ ಇಡೀ ಜೀವಸಂಕುಲವೇ ಹೈರಾಣಾಗುವಂತೆ ಮಾಡಿದ್ದ. ಮನುಷ್ಯರೇ ಹನಿಹನಿ ನೀರಿಗೆ ಹಾಹಾಕಾರ ಪಡುವ ಹಾಗಾದ್ರೆ, ಇನ್ನು ಮೂಕ ಪ್ರಾಣಿಪಕ್ಷಿಗಳ ಗೋಳು ಹೇಳತೀರದಂತಾಗಿದೆ. ಆದರೆ ಇತ್ತಿಚೆಗೆ ವೈರಲ್ ಆದ ವಿಡಿಯೋವೊಂದು ಮನುಷ್ಯ ಮೂಕಜೀವಗಳ ಸಂಕಷ್ಟಕ್ಕೂ ಸ್ಪಂದಿಸುತ್ತಾನೆ ಅನ್ನೊದಕ್ಕೆ ಉತ್ತಮ ನಿದಶ೯ನವಾಗಿದೆ. ಆ ವಿಡಿಯೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಮನೆ ಕೆಲಸದಾಕೆ ಮೇಲೆ ದೌರ್ಜನ್ಯ: ಕೂದಲು ಕತ್ತರಿಸಿ ಕ್ರೌರ್ಯ
IAS ಅಧಿಕಾರಿ ಅವ್ನಿಶ್ ಶರಣ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರೊ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪುಟ್ಟ ಹಕ್ಕಿಗೆ ಬಾಟಲಿ ಕ್ಯಾಪ್ ನಿಂದ ನೀರು ಕುಡಿಸೋ ದೃಶ್ಯ ಅದು. ಅದರ ಜೊತೆಗೆ ‘ಎರಡು ಹನಿ ಜೀವನಕ್ಕಾಗಿ’ ಅನ್ನೊ ಕಾಪ್ಷನ್ ಸಹ ಅವರು ಕೊಟ್ಟಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿ ಈ ರೀತಿ ಮೂಕಜೀವಿಗಳ ನೋವಿಗೆ ಸ್ಪಂದಿಸಿದಾಕೆ, ಅದೆಷ್ಟೋ ಜೀವಗಳಿಗೆ ಆಸರೆಯಾಗೊದಂತೂ ಸತ್ಯ.
https://twitter.com/RajuCha76958509/status/1527511451904397314?ref_src=twsrc%5Etfw%7Ctwcamp%5Etweetembed%7Ctwterm%5E1527511451904397314%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-offers-water-to-thirsty-sparrow-in-video-shared-by-ias-officer-this-is-humanity-says-internet-1951944-2022-05-20