ಮಹಾಶಿವರಾತ್ರಿ ಭಾರತದ ಪಂಚಾಂಗದಲ್ಲಿ ಅತ್ಯಂತ ಮಹತ್ವದ ಅಚರಣೆಯಾಗಿದೆ. ಹಿಂದೂ ಧರ್ಮದ ಪ್ರಕಾರ ಈ ದಿನ ಪವಿತ್ರ ದಿನ ಎಂದು ನಂಬಲಾಗಿದೆ. ಇದೇ ದಿನದಂದು ಶಿವನ ಭಕ್ತರು ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿರುತ್ತಾರೆ. ಈ ಶಿವ ಭಕ್ತರನ್ನ ಕನ್ವರಿಯಾ ಎಂದು ಸಹ ಕರೆಯಲಾಗುತ್ತೆ. ಇವರು ಗಂಗಾ ನದಿಯಿಂದ ಪವಿತ್ರ ಜಲವನ್ನ ಹೊತ್ತು ತಂದು ಶಿವನಿಗೆ ಅರ್ಪಿಸುತ್ತಾರೆ. ಅದಕ್ಕಂತಾನೇ ನೂರಾರು ಮೈಲಿ ಹೆಗಲ ಮೇಲೆ ನೀರನ್ನ ಹೊತ್ತು ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ.
ಇವರು ಹೀಗೆ ನೂರಾರು ಮೈಲಿ ಪಾದಯಾತ್ರೆ ಮಾಡುತ್ತಿರುವಾಗ, ಮಾರ್ಗ ಮಧ್ಯದಲ್ಲಿ ಕೆಲವರು ಉಪಹಾರಗಳನ್ನು ನೀಡುವುದು, ನೀರನ್ನ ನೀಡುವುದನ್ನ ನೋಡಬಹುದು. ಆದರೆ ಅಲಿಘಡ್‌ನಲ್ಲಿ ಯೋಗೇಶ್ ಅನ್ನೂ ವ್ಯಕ್ತಿ ಹೀಗೆ ನೀರನ್ನ ಹೊತ್ತುಕೊಂಡು ಬರುತ್ತಿರುವ ಭಕ್ತಾದಿಗಳಿಗೆ ಬಿಯರ್ ನೀಡಲು ಮುಂದಾದ ವಿಷಯ ಬೆಳಕಿಗೆ ಬಂದಿದೆ.
ಯೋಗೇಶ್ ಹೆಸರಿನ ಈ ವ್ಯಕ್ತಿ ಶಿವ ಭಕ್ತರಿಗೆ (ಕನ್ವರಿಯಾ) ಬಿಯರ್ ಕೊಡುವ ದೃಶ್ಯವನ್ನ ಅಲ್ಲೇ ಇದ್ದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೋವನ್ನ ಪತ್ರಕರ್ತ ಪಿಯೂಷ್ ರೈ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಕೂಡಾ ಆಗಿದೆ.
ಈಗ ಯೋಗೇಶ್‌ನನ್ನ ಬಂಧಿಸಲಾಗಿದೆ. ಇದಕ್ಕೆ ನೆಟ್ಟಿಗರು ಆ ವ್ಯಕ್ತಿ ಮಾಡಿರುವ ಅಪರಾಧ ಆದರೂ ಏನು ಎಂದು ಪಶ್ನಿಸಿದ್ದಾರೆ. ಆ ವ್ಯಕ್ತಿ ಮಾರಾಟ ಮಾಡುತ್ತಿರಲಿಲ್ಲ. ಬದಲಾಗಿ ಎಲ್ಲರಿಗೂ ವಿನಂತಿ ಮಾಡಿ ಕೇಳುತ್ತಿದ್ದಾನೆ. ಇಷ್ಮ ಇದ್ದವರು ಅದನ್ನ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟ ಇಲ್ಲದವರು ಅದನ್ನ ತಿರಸ್ಕರಿಸಿದ್ದಾರೆ. ಇದರಲ್ಲಿ ಆಗಿದ್ದ ಅಪರಾಧ ಏನು ಅನ್ನೋದೇ ಅನೇಕರ ಪ್ರಶ್ನೆ.
ಈ ವಿಡಿಯೋ ನೋಡಿದ ಇನ್ನೂ ಕೆಲವರು, ಕನ್ವರಿಯಾಗಳು ಸಾಮಾನ್ಯವಾಗಿ ಗಾಂಜಾ ಸೇವಿಸುತ್ತಾರೆ. ಅದು ತಪ್ಪಲ್ಲವೇ ? ಇನ್ನೂ ಬಿಯರ್ ಕೊಡುತ್ತಿದ್ದ ವ್ಯಕ್ತಿಯ ಬಂಧನ ಎಷ್ಟು ಸರಿ? ಅದನ್ನ ಸ್ವೀಕರಿಸುತ್ತಿದ್ದ ಜನರ ತಪ್ಪಿಲ್ಲವೇ ಎಂದು ಮರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗೆ ಬಿಯರ್ ಹಂಚುವುದಕ್ಕೂ ಪರವಾನಗಿ ಬೇಕಾ ಅನ್ನೊದು ಮತ್ತೊರ್ವರ ಪ್ರಶ್ನೆಯಾಗಿದೆ.
ಸದ್ಯಕ್ಕೆ ಯೋಗೇಶ್‌ನನ್ನ ಬಂಧಿಸಿದ್ದು, ಆತನನ್ನ ವಿಚಾರಣೆಗೆ ಒಳಪಡಿಸಲಾಗಿದೆ. ಈಗ ಆತನಿಂದ 14 ಬಿಯರ್ ಕ್ಯಾನ್ ಹಾಗೂ ಒಂದು ಬೈಕ್ ವಶ ಪಡಿಸಿಕೊಳ್ಳಲಾಗಿದೆ.