alex Certify SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ : ಡ್ರಾಪ್ ಕೊಡುವುದಾಗಿ ಕರೆದೊಯ್ದು ನಿಧಿಯಾಸೆಗೆ ನರಬಲಿ ಕೊಟ್ಟ ವ್ಯಕ್ತಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ : ಡ್ರಾಪ್ ಕೊಡುವುದಾಗಿ ಕರೆದೊಯ್ದು ನಿಧಿಯಾಸೆಗೆ ನರಬಲಿ ಕೊಟ್ಟ ವ್ಯಕ್ತಿ.!

ಚಿತ್ರದುರ್ಗ: ಅಪರಿಚಿತರು ಡ್ರಾಪ್ ಕೊಡುವ ನೆಪದಲ್ಲಿ ವಾಹನ ನಿಲ್ಲಿಸಿದರೆ ಹತ್ತುವ ಮುನ್ನ ಎಚ್ಚರವಿರಲಿ. ಇಲ್ಲೋರ್ವ ವ್ಯಕ್ತಿ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ನಿಧಿಯಾಸೆಗಾಗಿ ವ್ಯಕ್ತಿಯನ್ನೇ ನರಬಲಿ ಕೊಟ್ಟಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಪಾವಗಡದ ಜ್ಯೋತಿಷಿಯೊಬ್ಬರ ಮಾತು ನಂಬಿದ ಆಂದ್ರ ಮೂಲದ ಆನಂದ ರೆಡ್ಡಿ ಎಂಬಾತ ನಿಧಿಯಾಸೆಗಾಗಿ ನರಬಲಿ ಕೊಟ್ಟಿದ್ದಾನೆ. ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲಿಯುತ್ತಿದ್ದ ಪ್ರಭಾಕರ ಎಂಬಾತನನ್ನು ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಡಾಬಾವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆನಂದ್ ರೆಡ್ಡಿ, ಪಾವಗಡದ ಜ್ಯೋತಿಷಿ ರಾಮಕೃಷ್ಣನ ಬಳಿ ಜ್ಯೋತಿಷ ಕೇಳಿದ್ದ. ನಿಧಿಸಿಗಬೇಕೆಂದರೆ ನರಬಲಿಕೊಡಬೇಕು ಎಂದಿದ್ದಾನೆ. ಪರಶುರಾಮಪುರ ಪಶ್ಚಿಮದಲ್ಲಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ. ಆ ರಕವನ್ನು ಮಾರಮ್ಮ ದೇವಿಗೆ ಅರ್ಪಿಸು ಎಂದಿದ್ದನಂಎ. ಜ್ಯೋತಿಷಿ ಮಾತು ಕೇಳಿದ ಆನಂದ ರೆಡ್ಡಿ, ಭಾನುವರ ಸಂಜೆ ಪಶ್ಚಿಮ ದಿಕ್ಕಿನಲ್ಲಿ ಬಂದ ಪ್ರಭಾಕರನ ಬರ್ಬರ ಹತ್ಯೆ ಮಾಡಿದ್ದಾನೆ.

ಪ್ರಭಾಕರ ಬಸ್ ನಿಲ್ದಾಣದ ಬಳಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದ. ಅದೇ ಮಾರ್ಗವಾಗಿ ನಡೆದು ಬರುತ್ತಿದ್ದ ಆತನನ್ನು ಕಂದ ಆನಂದ ರೆಡ್ಡಿ ಬೈಕ್ ನಿಲ್ಲಿಸಿ ಡ್ರಾಪ್ ಕೊಡುತ್ತೇನೆ ಬನ್ನಿ ಎಂದು ಕರೆದೊಯ್ದಿದ್ದಾನೆ. ಬಳಿ ಮಾರಕಾಸ್ತ್ರಗಳಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜ್ಯೋತಿಷಿ ರಾಮಕೃಷ್ಣ ಹಾಗೂ ಆರೋಪಿ ಆನಂದ ರೆಡ್ಡಿ ಇಬ್ಬರನ್ನೂ ಬಂಧಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...