ತಾನು ಧರಿಸಿರುವ ಮಾಸ್ಕ್ ತೆಗೆದಲ್ಲಿ 80 ಲಕ್ಷ ರೂಗಳನ್ನು ಕೊಡುವುದಾಗಿ ಸಿರಿವಂತನೊಬ್ಬ ಮಹಿಳೆಯೊಬ್ಬರಿಗೆ ಆಫರ್ ಕೊಟ್ಟಿರುವ ವಿಚಿತ್ರ ಘಟನೆಯೊಂದು ವಿಮಾನದೊಳಗೆ ಸಂಭವಿಸಿದೆ. ಪ್ರಯಾಣಿಕ ಈ ವಿಚಿತ್ರ ಕೋರಿಕೆಯಿಂದ ಗಗನ ಸಖಿ ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ.
ಸ್ಟೀವ್ ಕರ್ಶ್ ಹೆಸರಿನ ವ್ಯಕ್ತಿಯೊಬ್ಬರು ಸರಣಿ ಟ್ವೀಟ್‌ಗಳ ಮೂಲಕ ಈ ಘಟನೆಯನ್ನು ವಿವರಿಸಿದ್ದಾರೆ. “ನಾನೀಗ ಡೆಲ್ಟಾ ಏರ್‌ವೇಸ್ ವಿಮಾನವೊಂದರಲ್ಲಿ ಇದ್ದೇನೆ. ಪ್ರಥಮ ದರ್ಜೆಯ ಕ್ಯಾಬಿನ್‌ನಲ್ಲಿ ನನ್ನ ಪಕ್ಕದಲ್ಲಿ ಕುಳಿತ ಮಹಿಳೆ, ಇಡೀ ಪ್ರಯಾಣದುದ್ದಕ್ಕೂ ತನ್ನ ಮಾಸ್ಕ್ ತೆಗೆದರೆ $100,000 ಕೊಡುವುದಾಗಿ ನೀಡಿದ್ದ ಆಫರ್ ತಿರಸ್ಕರಿಸಿದ್ದಾರೆ. ಆಕೆ ಫಾರ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ,” ಎಂದಿದ್ದಾರೆ.
ತಾನು ಅದೆಷ್ಟೇ ಬಾರಿ ಕೇಳಿದರೂ ಆಕೆ ಮಾಸ್ಕ್ ತೆರೆಯಲಿಲ್ಲ ಎನ್ನುವ ಸ್ಟೀವ್, ಕೊನೆಗೂ ಆಕೆ ಉಪಹಾರ ಸೇವಿಸುವ ಸಂದರ್ಭದಲ್ಲಿ ಮಾಸ್ಕ್ ತೆರೆದಿದ್ದಾರೆ ಎಂದಿದ್ದಾರೆ.
ಸ್ಟೀವ್‌ರ ಈ ಟ್ವೀಟ್‌ಗಳು ಬಹಳಷ್ಟು ನೆಟ್ಟಿಗರಿಗೆ ಸಿಟ್ಟು ತರಿಸಿವೆ. “ನಿಮಗೆ ಮಹಿಳೆಯರಿಗೆ ಪ್ರಯಾಣದ ನಡುವೆ ಹೀಗೆ ದುಡ್ಡು ಕೊಡುವ ಅಭ್ಯಾಸವಿದೆಯೇ?” ಎಂದು ನೆಟ್ಟಿಗರೊಬ್ಬರು ಸ್ಟೀವ್‌ರನ್ನು ಪ್ರಶ್ನಿಸಿದ್ದಾರೆ.
ಸ್ಟೀವ್‌ಗೆ ಈ ಖಯಾಲಿ ಬಹಳ ದಿನಗಳಿಂದ ಇದೆ ಎಂದು ವರದಿಯಾಗಿದೆ. ಈ ಹಿಂದೆಯೂ ಸಹ ಸ್ಟೀವ್ ಹೀಗೇ ಮಹಿಳೆಯೊಬ್ಬರಿಗೆ ಮಾಸ್ಕ್ ತೆಗೆದರೆ ಎಂಟು ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದ್ದ.
ಕೊರೋನಾ ಸಾಂಕ್ರಮಿಕದ ಸಂದರ್ಭದಲ್ಲಿ ಜನರಿಗೆ ಸೋಂಕು ಹಾಗೂ ಲಸಿಕೆಗಳ ಕುರಿತಂತೆ ಬಹಳ ತಪ್ಪು ಮಾಹಿತಿಗಳನ್ನು ಈತ ಹಬ್ಬಿಸುತ್ತಿದ್ದ ಎಂದು ಹೇಳಲಾಗಿದೆ.