ವ್ಯಕ್ತಿಯೊಬ್ಬರು 12 ಅಡಿ ಅಲಿಗೇಟರ್ ದಾಳಿಗೆ ಒಳಗಾಗಿ ಜೀವಂತವಾಗಿ ತಪ್ಪಿಸಿಕೊಂಡು ಬಂದ ಪ್ರಸಂಗ ಫ್ಲೋರಿಡಾದಲ್ಲಿ ನಡೆದಿದೆ. ಜುವಾನ್ ಕಾರ್ಲೋಸ್ ಲಾ ವರ್ಡೆ ಎಂಬ ವ್ಯಕ್ತಿ ಆಗಸ್ಟ್ 3 ರಂದು ಥೋನೊಟೊಸಾಸ್ಸಾ ಸರೋವರದಲ್ಲಿ ಈಜುತ್ತಿದ್ದಾಗ ಘಟನೆ ಸಂಭವಿಸಿದೆ.
ವರದಿಗಳ ಪ್ರಕಾರ, ಅವರು ತಮ್ಮ ಕಂಪನಿಗೆ ಶೈಕ್ಷಣಿಕ ವಿಡಿಯೊ ತಯಾರಿಸುವ ಕೆಲಸದಲ್ಲಿದ್ದಾಗ ಬೃಹತ್ ಮೊಸಳೆಯೊಂದಿಗೆ ಮುಖಾಮುಖಿಯಾದರು.
ಇಡೀ ದಾಳಿಯ ಘಟನೆ ನಿಖರ ಕ್ಷಣವನ್ನು ಡ್ರೋನ್ ಸೆರೆಹಿಡಿದಿದೆ.
ತಾನು ಮೊಸಳೆಯೊಂದಿಗೆ 360 ಡಿಗ್ರಿ ತಿರುಗಿದೆ, ಬಳಿಕ ಪವಾಡದ ರೀತಿ ಈಜಿ ದಡ ಸೇರಿದೆ ಎಂದು ಆತ ವಿವರಿಸಿದ್ದು, ಡ್ರೋನ್ ವಿಡಿಯೊ ನೀರಿನಲ್ಲಿ ಅವರ ಹೋರಾಟವನ್ನು ತೋರಿಸುತ್ತದೆ.
ಅದೃಷ್ಟವಶಾತ್ ಒಬ್ಬರು ಆತನ ಸ್ಥಿತಿ ಗಮನಿಸಿ ತುರ್ತು ಸಹಾಯವಾಣಿ 911 ಗೆ ಕರೆ ಮಾಡಿ ನೆರವು ಕೋರಿದರು. ಬಳಿಕ ಅವರನ್ನು ಟ್ಯಾಂಪಾ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಕ್ಲಿನಿಕಲ್ ಪರಿಶೀಲನೆ ಬಳಿಕ ತಲೆಬುರುಡೆ ಮುರಿದಿರುವುದು ಕಂಡುಬಂದಿದೆ. ದವಡೆಯಲ್ಲಿ ಅನೇಕ ಮೂಳೆ ಮುರಿತಗಳಾಗಿದ್ದು
ತಕ್ಷಣವೇ ಶಸ್ತ್ರ ಚಿಕಿತ್ಸೆ ನಡೆಸಿದ್ದು ಆಸ್ಪತ್ರೆಯಲ್ಲಿ ಒಂದು ವಾರದ ಚೇತರಿಕೆಯ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿ, ಮನೆಗೆ ಕಳಿಸಿಕೊಡಲಾಗಿದೆ. ಸದ್ಯ ಮುಖದ ಆಕಾರವೇ ಬದಲಾದಂತೆ ಕಾಣಿಸುತ್ತಿದೆ.