ಬಾಲಿವುಡ್ ನಟ ಸನ್ನಿ ಡಿಯೋಲ್, 70-80ರ ದಶಕದ ಸೂಪರ್ ಹಿಟ್ ಹಿರೋ. ತಮ್ಮ ಆಕ್ಷನ್ ಸ್ಟಂಟ್ ಹಾಗೂ ಡೈಲಾಗ್ ಡಿಲೆವರಿಗೆ ಅಂತಾನೇ ಫೇಮಸ್ ಆಗಿದ್ದವರು. ಇಂದಿಗೂ ಅಭಿಮಾನಿಗಳು ಇವರ ಸ್ಟೈಲ್‌ನ್ನ ಮಿಮಿಕ್ರಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ತಿರ್ತಾರೆ. ಇತ್ತೀಚೆಗೆ ವೈರಲ್ ಆಗಿರುವ ಈ ವಿಡಿಯೋ ಸನ್ನಿ ಡಿಯೋಲ್ ಅವರ ಆ ದಿನಗಳನ್ನ ಮತ್ತೆ ನೆನಪು ಮಾಡಿದೆ. ಅಷ್ಟೆ ಅಲ್ಲ ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ, ತನ್ನ ಗೆಳೆಯರೊಂದಿಗೆ, ನಿರ್ಜನ ರಸ್ತೆಯಲ್ಲಿ ಹೋಗುತ್ತಿರುತ್ತಾನೆ. ಅದೇ ಸಮಯದಲ್ಲಿ ಬೀದಿನಾಯಿಯೊಂದು ಆ ವ್ಯಕ್ತಿಯನ್ನ ಬೆನ್ನಟ್ಟಿಕೊಂಡು ಬರುತ್ತೆ. ಕೆಲ ನಿಮಿಷದವರೆಗೆ ಆತ ನಾಯಿ ಸುಮ್ಮನೆ ಬಂದಿರಬಹುದು, ಆ ನಂತರ ಹೋಗುತ್ತೆ ಅಂದುಕೊಂಡೇ ಹೋಗುತ್ತಿರುತ್ತಾನೆ. ಆದರೆ ಹಿಂಬಾಲಿಸುವುದನ್ನ ಬಿಡದ ಆ ನಾಯಿಗೆ ಈ ವ್ಯಕ್ತಿ ಸನ್ನಿ ಡಿಯೋಲ್ ಸ್ಟೈಲ್‌ಲ್ಲಿ ಧಮ್ಕಿ ಹಾಕುತ್ತಾನೆ. ಅದನ್ನ ಇನ್ನೊಬ್ಬ ತನ್ನ ಮೊಬೈಲ್‌ಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಅಸಲಿಗೆ ಈ ವ್ಯಕ್ತಿ ಬೆನ್ನಟ್ಟಿಕೊಂಡು ಬಂದಿದ್ದ ನಾಯಿಗೆ ಈ ವ್ಯಕ್ತಿ, ‘ಓಯೇ ರುಕ್ಜಾ… ಕಸಮ್ ಗಂಗಾ ಮೈಯಾ ಕಿ.’ ಎಂದು ಹೇಳಿ ನಾಯಿ ಮುಂದೆ ಡೈಲಾಗ್ ಹೇಳಿದ್ದಾನೆ. ಅದು ಕೂಡಾ ಸೇಮ್ ಟು ಸೇಮ್ ಸನ್ನಿಡಿಯೋಲ್ ಸ್ಟೈಲ್‌ಲ್ಲಿ.
‘iam_anujgupta_’ಅನ್ನೊ ಇನ್ಸಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು. ಈಗಾಗಲೇ 64 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 4,300 ಲೈಕ್‌ಗಳನ್ನು ಪಡೆದುಕೊಂಡಿದೆ.